ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಮಿಟಿಯೋರ್ 350 ಕ್ರೂಸರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಿಟಿಯೋರ್ 350 ಬೈಕ್ ಅನ್ನು ಫೈರ್‌ಬಾಲ್, ಸ್ಟೆಲ್ಲಾರ್ ಹಾಗೂ ಸೂಪರ್ ನೋವಾ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಫೈರ್ ಬಾಲ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.75 ಲಕ್ಷಗಳಾದರೆ, ಸ್ಟೆಲ್ಲಾರ್ ಬೈಕಿನ ಬೆಲೆ ರೂ.1.81 ಲಕ್ಷಗಳಾಗಿದೆ. ಇನ್ನು ಸೂಪರ್ ನೋವಾ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.90 ಲಕ್ಷಗಳಾಗಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯು ಮಿಟಿಯೋರ್ 350 ಬೈಕಿನ ಮೇಲೆ 3 ವರ್ಷಗಳ ಸ್ಟಾಂಡರ್ಡ್ ವಾರಂಟಿ ನೀಡುತ್ತದೆ. ಹೊಸ ಮಿಟಿಯೋರ್ 350 ಬೈಕಿನಲ್ಲಿ 349 ಸಿಸಿಯ ಸಿಂಗಲ್ ಸಿಲಿಂಡರ್ ಏರ್-ಆಯಿಲ್ ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್ ಅಳವಡಿಸಲಾಗಿದೆ.
ಹೊಸ ಮಿಟಿಯೋರ್ 350 ಕ್ರೂಸರ್ ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.