ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 320 ಡಿ ಸ್ಪೋರ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮರು ಬಿಡುಗಡೆಗೊಳಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ 330 ಐ ಸ್ಪೋರ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದಾಗ 320 ಡಿ ಸ್ಪೋರ್ಟ್ ಮಾದರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.42.10 ಲಕ್ಷಗಳಾಗಿದೆ.
320 ಡಿ ಸ್ಪೋರ್ಟ್ ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ 3 ಸೀರಿಸ್ ಕಾರುಗಳ ಎಂಟ್ರಿ ಲೆವೆಲ್ ಡೀಸೆಲ್ ಮಾದರಿಯಾಗಿದೆ.