ಲ್ಯಾಂಡ್ ರೋವರ್ ಕಂಪನಿಯು ತನ್ನ ಡಿಫೆಂಡರ್ ಎಸ್‌ಯುವಿಯನ್ನು ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಡೀಸೆಲ್ ಆವೃತ್ತಿಯನ್ನು ಮೂರು ಡೋರುಗಳ 90 ಹಾಗೂ ಐದು ಡೋರುಗಳ 110 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.
ಡೀಸೆಲ್ ಚಾಲಿತ ಲ್ಯಾಂಡ್ ರೋವರ್ ಡಿಫೆಂಡರ್ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.94.36 ಲಕ್ಷಗಳಿಂದ ರೂ.1.08 ಕೋಟಿಗಳಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಡೀಸೆಲ್ ಆವೃತ್ತಿಯನ್ನು ಎಸ್‌ಇ, ಹೆಚ್‌ಎಸ್‌ಇ, ಎಕ್ಸ್-ಡೈನಾಮಿಕ್ ಹೆಚ್‌ಎಸ್‌ಇ ಹಾಗೂ ಎಕ್ಸ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಲ್ಯಾಂಡ್ ರೋವರ್ ಡಿಫೆಂಡರ್‌ನ ಡೀಸೆಲ್ ಆವೃತ್ತಿಯು ಪೆಟ್ರೋಲ್ ಆವೃತ್ತಿಯಲ್ಲಿರುವ ಫೀಚರ್, ಇನ್ಸ್'ಟ್ರೂಮೆಂಟ್ ಹಾಗೂ ವಿನ್ಯಾಸಗಳನ್ನೇ ಹೋಲುತ್ತದೆ.
ಲ್ಯಾಂಡ್ ರೋವರ್ ಡಿಫೆಂಡರ್ ಡೀಸೆಲ್ ಎಂಜಿನ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.