ಎಲಾಂಟ್ರಾ ಸೆಡಾನ್ ಬಿಎಸ್ 6 ಡೀಸೆಲ್ ಕಾರು ಬಿಡುಗಡೆಗೊಳಿಸಿದ ಹ್ಯುಂಡೈ ಇಂಡಿಯಾ

DriveSpark Kannada 2020-06-25

Views 79

ಹ್ಯುಂಡೈ ಇಂಡಿಯಾ ತನ್ನ ಎಲಾಂಟ್ರಾ ಸೆಡಾನ್ ಕಾರ್ ಅನ್ನು ಬಿಎಸ್ 6 ಡೀಸೆಲ್ ಎಂಜಿನ್‌ನೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹ್ಯುಂಡೈ ಎಲಾಂಟ್ರಾ
ಬಿಎಸ್ 6 ಡೀಸೆಲ್ ಎಂಜಿನ್ ಕಾರ್ ಅನ್ನು ಎಸ್ಎಕ್ಸ್ ಹಾಗೂ ಎಸ್ಎಕ್ಸ್ (ಒ) ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಕಾರಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 18.70 ಲಕ್ಷ ರೂಪಾಯಿಗಳಾದರೆ ಟಾಪ್ ಎಂಡ್ ಮಾದರಿಯ ಬೆಲೆ 20.65 ಲಕ್ಷ ರೂಪಾಯಿಗಳಾಗಿದೆ.
ಹೊಸ ಹ್ಯುಂಡೈ ಎಲಾಂಟ್ರಾ ಬಿಎಸ್ 6 ಡೀಸೆಲ್ ಕಾರಿನಲ್ಲಿ 1.5-ಲೀಟರಿನ ಸಿಆರ್‌ಡಿ ಎಂಜಿನ್‌ ಅಳವಡಿಸಲಾಗಿದೆ.

ಈ ಎಂಜಿನ್ 4000 ಆರ್‌ಪಿಎಂನಲ್ಲಿ 114 ಬಿಹೆಚ್‌ಪಿ ಪವರ್ ಹಾಗೂ 1,750 ಆರ್‌ಪಿಎಂನಲ್ಲಿ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Share This Video


Download

  
Report form
RELATED VIDEOS