ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್‌ಯುವಿಯಾದ ಥಾರ್ ಕಾರಿನ ಹೊಸ ತಲೆಮಾರಿನ ಬಿಡುಗಡೆಗೊಳಿಸಿದೆ. ಹೊಸ ಥಾರ್ ಕಾರ್ ಅನ್ನು ಎಎಕ್ಸ್ ಹಾಗೂ ಎಲ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.
ಈ ಹೊಸ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.9.80 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.12.95 ಲಕ್ಷಗಳಾಗಿದೆ. ಥಾರ್ ಕಾರನ್ನು ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಎಂಜಿನ್ ನಲ್ಲಿಯೂ ಬಿಡುಗಡೆಗೊಳಿಸಲಾಗಿದೆ.
ಹೊಸ ಥಾರ್ ಕಾರಿನಲ್ಲಿ ರಿ ಡಿಸೈನ್ ಮಾಡಲಾದ ಸೆವೆನ್ ಸ್ಲಾಟ್ ಗ್ರಿಲ್, ರೌಂಡ್ ಶೇಪಿನ ಹೆಡ್‌ಲ್ಯಾಂಪ್, 18-ಇಂಚಿನ ಆಕರ್ಷಕ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಬಂಪರ್, ಸ್ಕಫ್ ಪ್ಲೇಟ್, ಬಾಕ್ಸಿ ಮಾದರಿಯ ಟೇಲ್ ಲೈಟ್‌ಗಳನ್ನು ಅಳವಡಿಸಲಾಗಿದೆ.
ದೂರದಿಂದ ನೋಡಿದಾಗ ಹೊಸ ಥಾರ್ ಕಾರಿನ ವಿನ್ಯಾಸವು ಜೀಪ್ ರ‍್ಲ್ಯಾಂಗ್ಲರ್ ಮಾದರಿಯ ವಿನ್ಯಾಸದಂತೆ ಕಾಣುತ್ತದೆ. ಥಾರ್ ಕಾರಿನಲ್ಲಿರುವ ಲ್ಯಾಡರ್-ಫ್ರೇಮ್ ಚಾರ್ಸಿ ಹಾಗೂ ಹೊಸ ಸಸ್ಪೆಂಷನ್ ಗಳು ಈ ಕಾರಿನ ಪರ್ಫಾಮೆನ್ಸ್ ಅನ್ನು ಮತ್ತಷ್ಟು ಹೆಚ್ಚಿಸಿವೆ.