ಹೊಸ ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

DriveSpark Kannada 2020-09-08

Views 86

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹ್ಯಾರಿಯರ್ ಎಸ್‌ಯುವಿಯ ಹೊಸ ಎಕ್ಸ್‌ಟಿ ಪ್ಲಸ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.16.99ಗಳಾಗಿದೆ.

ಈ ಬೆಲೆಯು ಪರಿಚಯಾತ್ಮಕವಾಗಿದ್ದು, ಹೊಸ ಬೆಲೆಯನ್ನು ಅಕ್ಟೋಬರ್ 1ರಿಂದ ಪರಿಷ್ಕರಿಸಲಾಗುವುದೆಂದು ಕಂಪನಿ ಹೇಳಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡುವ ಹಾಗೂ ಡಿಸೆಂಬರ್ 31ರೊಳಗೆ ವಿತರಣೆ ಪಡೆದುಕೊಳ್ಳುವ ಎಲ್ಲಾ ಗ್ರಾಹಕರಿಗೆ ಈ ಬೆಲೆ ಅನ್ವಯಿಸಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಹೆಚ್ಚಿನ ಬೇಡಿಕೆಯನ್ನು ಪಡೆಯುವ ಸಲುವಾಗಿ ಈ ಎಸ್‌ಯುವಿಯನ್ನು ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ವರ್ಷದ ಜುಲೈ ತಿಂಗಳಿನಲ್ಲಿ ಹ್ಯಾರಿಯರ್ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

Share This Video


Download

  
Report form
RELATED VIDEOS