ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಎಕ್ಸ್ 7 ಡಾರ್ಕ್ ಶ್ಯಾಡೋ ಲಿಮಿಟೆಡ್ ಎಡಿಷನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಎಕ್ಸ್ 7 ಡಾರ್ಕ್ ಶ್ಯಾಡೋ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.02 ಕೋಟಿಗಳಾಗಿದೆ.
ಕಂಪನಿಯು ಈ ಎಸ್‌ಯುವಿಯ 500 ಯುನಿಟ್'ಗಳನ್ನು ಮಾತ್ರ ಮಾರಾಟ ಮಾಡಲಿದೆ. ಬಿಎಂಡಬ್ಲ್ಯು ಎಕ್ಸ್ 7 ಡಾರ್ಕ್ ಶ್ಯಾಡೋ ಎಸ್‌ಯುವಿಯು ಸ್ಟ್ಯಾಂಡರ್ಡ್ ಎಕ್ಸ್ 7 ಎಂ 50 ಡಿ ಎಸ್‌ಯು ಮಾದರಿಯನ್ನು ಆಧರಿಸಿದೆ.
ಫ್ರೋಜನ್ ಆರ್ಕ್ಟಿಕ್ ಗ್ರೇ ಮೆಟಾಲಿಕ್ ಪೇಂಟ್ ಸ್ಕೀಮ್, ಎಕ್ಸ್ 7 ಡಾರ್ಕ್ ಶ್ಯಾಡೋ ಎಸ್‌ಯುವಿಯ ಪ್ರಮುಖ ಆಕರ್ಷಣೆಯಾಗಿದೆ. ಹೈ ಕ್ವಾಲಿಟಿ, ಎಲಾಬೊರೇಟ್ ಬಾಡಿ ಫಿನಿಷಿಂಗ್ ಅನ್ನು ಇದೇ ಮೊದಲ ಬಾರಿಗೆ ಬಿಎಂಡಬ್ಲ್ಯು ಎಕ್ಸ್ ಮಾದರಿಯಲ್ಲಿ ಬಳಸಲಾಗಿದೆ.
ಬಿಎಂಡಬ್ಲ್ಯು ಎಕ್ಸ್ 7 ಡಾರ್ಕ್ ಶ್ಯಾಡೋ ಲಿಮಿಟೆಡ್ ಎಡಿಷನ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.