ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಇಂಟರ್‍ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳನ್ನು 2018ರ ನವೆಂಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು.
ಈ ವರ್ಷದ ಆರಂಭದಲ್ಲಿ ಈ ಬೈಕ್ ಗಳನ್ನು ಬಿಎಸ್-6 ಎಂಜಿನ್ ನೊಂದಿಗೆ ಅಪ್ ಡೇಟ್ ಗೊಳಿಸಲಾಗಿತ್ತು. ಈ ಎರಡೂ ಬೈಕುಗಳು ಭಾರತದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದು ಸಾಕಷ್ಟು ಜನಪ್ರಿಯತೆಯನ್ನು ಹೊಂದಿವೆ.
ಈಗ ರಾಯಲ್ ಎನ್‍ಫೀಲ್ಡ್ ಕಂಪನಿಯು ಈ ಟ್ವಿನ್ ಬೈಕುಗಳಲ್ಲಿ ಟ್ರಿಪ್ಪರ್ ಎಂಬ ಪ್ರತ್ಯೇಕ ಪಾಡ್ ಮೂಲಕ ಬ್ಲೂಟೂತ್ ಹಾಗೂ ನ್ಯಾವಿಗೇಷನ್ ಅಸಿಸ್ಟ್ ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ.
ಹೊಸ ಫೀಚರ್ ಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.