ಚೆನ್ನೈ ಮೂಲದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ.
ಕಂಪನಿಯು ಬಿಎಸ್ 6 ಅಪ್ ಡೇಟ್ ನಂತರ ಇದೇ ಮೊದಲ ಬಾರಿಗೆ ಈ ಎರಡೂ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯು ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯನ್ನು ರೂ.8,000ಗಳಷ್ಟು ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕಿನ ಬೆಲೆಯನ್ನು ರೂ.9,000ಗಳಷ್ಟು ಹೆಚ್ಚಿಸಿದೆ.