ಯಮಹಾ ಕಂಪನಿಯು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ರೇಝಡ್ಆರ್ 125 ಎಫ್ ಐ ಹಾಗೂ ಯಮಹಾ ರೇಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ ಐ ಬಿಎಸ್ 6 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು.
ಫಸಿನೊ 125 ಎಫ್ ಐ ಸ್ಕೂಟರ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಕಂಪನಿಯು ಈ ಎಲ್ಲಾ ಮೂರು ಮಾದರಿಗಳ ಬೆಲೆಯನ್ನು ಹೆಚ್ಚಿಸಿತ್ತು.
ಫಸಿನೊ ಬೆಲೆಯನ್ನು ಕೂಡ ಹೆಚ್ಚಿಸಲಾಗಿತ್ತು. ರೇಝಡ್ಆರ್ 125 ಎಫ್ ಐ ಹಾಗೂ ಯಮಹಾ ರೇಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ ಐಗಳ ಬೆಲೆಯನ್ನು ರೂ.800ಗಳವರೆಗೆ ಹೆಚ್ಚಿಸಲಾಗಿತ್ತು.
ಈಗ ಯಮಹಾ ತನ್ನ 125 ಸಿಸಿ ಸ್ಕೂಟರ್‌ಗಳ ಬೆಲೆಗಳನ್ನು ಮತ್ತೊಮ್ಮೆ ಹೆಚ್ಚಿಸಿದೆ.