ಹೊಸ ಬೊನ್ನೆವಿಲ್ಲೆ ಬಾಬರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್ ಮೋಟರ್ ಸೈಕಲ್ಸ್

DriveSpark Kannada 2021-05-26

Views 1

ಟ್ರಯಂಫ್ ಮೋಟರ್ ಸೈಕಲ್ಸ್ ಕಂಪನಿಯು ಭಾರತದಲ್ಲಿ 2021ರ ಬೊನ್ನೆವಿಲ್ಲೆ ಬಾಬರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಾಬರ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.11.75 ಲಕ್ಷಗಳಾಗಿದೆ.

ಈ ಬೈಕ್ ಅನ್ನು ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಬಹುದು. ಹೊಸ ಬಾಬರ್ ಬೈಕ್ ಅನ್ನು ಮ್ಯಾಟ್ ಸ್ಟಾರ್ಮ್ ಗ್ರೇ ಮ್ಯಾಟ್ ಐರನ್‌ಸ್ಟೋನ್, ಕಾರ್ಡೊವನ್ ರೆಡ್, ಜೆಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

2021ರ ಬೊನ್ನೆವಿಲ್ಲೆ ಬಾಬರ್ ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್, ಎಸ್‌ಒಹೆಚ್‌ಸಿ, ಪ್ಯಾರೆಲಲ್ ಟ್ವಿನ್, ಫ್ಯೂಯಲ್ ಇಂಜೆಕ್ಟೆಡ್ 1200 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6100 ಆರ್‌ಪಿಎಂನಲ್ಲಿ 76.9 ಬಿಹೆಚ್‌ಪಿ ಪವರ್ ಹಾಗೂ 4000 ಆರ್‌ಪಿಎಂನಲ್ಲಿ 106 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟ್ರಯಂಫ್ ಮೋಟರ್ ಸೈಕಲ್ಸ್ ಬೊನ್ನೆವಿಲ್ಲೆ ಬಾಬರ್ ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS