ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ ಗ್ಲೋಸ್ಟರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ. ಹೊಸ ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನುಮೊದಲ ಬಾರಿಗೆ 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.
ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು ಸೂಪರ್, ಸ್ಮಾರ್ಟ್, ಶಾರ್ಪ್ ಹಾಗೂ ಸ್ಯಾವಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿಯೊಂದು ಮಾದರಿಗಳಲ್ಲೂ ಹಲವಾರು ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ನೀಡಲಾಗುತ್ತದೆ. ಬೇಸ್ ಮಾದರಿಯಾದ ಸೂಪರ್ ನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.28.98 ಲಕ್ಷಗಳಾದರೆ, ಟಾಪ್-ಎಂಡ್ 'ಸ್ಯಾವಿ' ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.35.38 ಲಕ್ಷಗಳಾಗಿದೆ.
ಈ ಪ್ರೀಮಿಯಂ ಎಸ್‌ಯುವಿಗಾಗಿ ಬುಕಿಂಗ್ ಆರಂಭವಾಗಿದ್ದು, ವಿತರಣೆಗಳು ಶೀಘ್ರದಲ್ಲೇ ಆರಂಭವಾಗಲಿವೆ.