ಎಂಜಿ ಮೋಟಾರ್ ಕಂಪನಿಯು ತನ್ನ ಮುಂಬರುವ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರಿನ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್ 21ರಿಂದ 28ರವರೆಗೆ ನಡೆಯುವ 2021ರ ಶಾಂಘೈ ಮೋಟಾರ್ ಶೋದಲ್ಲಿ ಸೈಬರ್‌ಸ್ಟರ್ ಕಾನ್ಸೆಪ್ಟ್ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗುವುದು.
ಕಂಪನಿಯು ಬಿಡುಗಡೆಗೊಳಿಸಿರುವ ಚಿತ್ರಗಳು ಸೈಬರ್‌ಸ್ಟರ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಹಾಗೂ ಎಕ್ಸ್'ಟಿರಿಯರ್ ವಿನ್ಯಾಸದ ಬಗೆ ಮಾಹಿತಿ ನೀಡುತ್ತವೆ. ಈ ಕಾನ್ಸೆಪ್ಟ್ ಕಾರ್ ಅನ್ನು ಲಂಡನ್‌ನ ಎಂಜಿ ಅಡ್ವಾನ್ಸ್ಡ್ ಡಿಸೈನ್ ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಎರಡು-ಡೋರ್, ಎರಡು ಸೀಟುಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸೂಪರ್‌ಕಾರ್‌ನಲ್ಲಿ ಲೇಸರ್ ಬೆಲ್ಟ್ ಎಲ್ಇಡಿ ಸ್ಟ್ರಿಪ್, ಹ್ಯಾಕರ್ ಬ್ಲೇಡ್ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.
ಎಂಜಿ ಮೋಟಾರ್ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.