ಎಂಜಿ ಮೋಟಾರ್ ಕಂಪನಿಯು ತನ್ನ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಹೊಸ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಕಾರು ಮಾರುಕಟ್ಟೆಯಲ್ಲಿರುವ ಕಾರಿಗಿಂತ ಹಲವಾರು ಹೊಸ ಬದಲಾವಣೆಗಳನ್ನು ಹೊಂದಿದೆ.
ಹೊಸ ಝಡ್ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಎಕ್ಸೈಟ್ ಹಾಗೂ ಎಕ್ಸ್‌ಕ್ಲೂಸಿವ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಕ್ಸೈಟ್ ಮಾದರಿಯ ಆರಂಭಿಕ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ 20,99,800ಗಳಾದರೆ, ಎಕ್ಸ್‌ಕ್ಲೂಸಿವ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.24,18,000ಗಳಾಗಿದೆ.
ಎಂಜಿ ಮೋಟಾರ್ ಕಂಪನಿಯು ಈ ಹೊಸ ಕಾರಿನಲ್ಲಿ ಹೈಟೆಕ್ ಟೆಕ್ನಾಲಜಿಯನ್ನು ಹೊಂದಿರುವ 44.5 ಕಿ.ವ್ಯಾನ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ. ಈ ಹೊಸ ಬ್ಯಾಟರಿಯಿಂದಾಗಿ ಝಡ್ಎಸ್ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 419 ಕಿ.ಮಿಗಳವರೆಗೆ ಚಲಿಸಲಿದೆ.
ಹೊಸ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.