ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ತನ್ನ ಹೊಸ ಹೋಂಡಾ ಡಬ್ಲ್ಯುಆರ್-ವಿ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.8,49,900ಗಳಾಗಿದೆ.
ಹೊಸ ಕಾರು ಅಪ್ ಡೇಟ್ ಮಾಡಲಾದ ಎಕ್ಸ್ ಟಿರಿಯರ್ ಸ್ಟೈಲಿಂಗ್, ರಿಚ್ ಕ್ಯಾಬಿನ್ ಹಾಗೂ ಬಿಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ. ಹೊಸ ಹೋಂಡಾ ಡಬ್ಲ್ಯುಆರ್-ವಿ ಕಾರು ಹೊಸ ಸಾಲಿಡ್ ವಿಂಗ್ ಕ್ರೋಮ್ ಲೌವರ್ ಸ್ಟೈಲ್ ಗ್ರಿಲ್, ಇಂಟಿಗ್ರೇಟೆಡ್ ಡಿಆರ್‌ಎಲ್, ಪೊಸಿಷನ್ ಲ್ಯಾಂಪ್‌ಗಳನ್ನು ಹೊಂದಿರುವ ಹೊಸ ಎಲ್‌ಇಡಿ
ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸುಧಾರಿತ ಎಲ್‌ಇಡಿ ಫಾಗ್ ಲ್ಯಾಂಪ್ ಹಾಗೂ ಎಲ್‌ಇಡಿ ರೇರ್ ಕಾಂಬಿನೇಶನ್ ಲ್ಯಾಂಪ್‌ಗಳನ್ನು ಹೊಂದಿದೆ.