ಬಿಗ್ ಬಾಸ್ ಕನ್ನಡ ಸೀಸನ್ 5 : ಸಮೀರ್ ಆಚಾರ್ಯಗೆ ಸೀರಿಯಸ್ ನೆಸ್ ಇಲ್ಲ ಎಂದ ಜಗನ್ | Filmibeat Kannada

Filmibeat Kannada 2017-10-27

Views 743

ದೊಡ್ಮನೆ'ಯೊಳಗೆ ತಮ್ಮ ಆಚಾರ-ವಿಚಾರಗಳ ಜೊತೆಗೆ 'ಬಿಗ್ ಬಾಸ್' ನೀಡುತ್ತಿರುವ ಟಾಸ್ಕ್ ಗಳನ್ನ ತಮ್ಮ ಕೈಲಾದಷ್ಟು ಮಾಡುತ್ತಿರುವ ಸಮೀರಾಚಾರ್ಯ ರವರಿಗೆ ಸೀರಿಯಸ್‌ನೆಸ್ ಇಲ್ಲವಂತೆ.! ಹಾಗಂತ ಹೇಳಿದವರು 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್.!ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರ 'ಮೊಟ್ಟೆ'ಯನ್ನು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಇದೇ ಟಾಸ್ಕ್ ವಿಚಾರವಾಗಿ ಮನೆಯೊಳಗೆ ಗದ್ದಲ-ಗಲಾಟೆ ಕೂಡ ನಡೆದಿದೆ. ಈ ಎಲ್ಲದರ ನಡುವೆ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರಿಗೆ ಸೀರಿಯಸ್‌ನೆಸ್ ಇಲ್ಲ ಅಂತ ಜಗನ್ನಾಥ್ ಹೇಳಿದ್ದಾರೆ. ಸಮೀರಾಚಾರ್ಯ ಜೊತೆಗೆ ಮಾತನಾಡುತ್ತಿರುವಾಗಲೇ, ''ಟಾಸ್ಕ್ ನ ಎಲ್ಲರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ನಿಮಗೆ ಸೀರಿಯಸ್ ನೆಸ್ ಇಲ್ಲ. ಟಾಸ್ಕ್ ನಡೆಯುವಾಗ ನಮಗೂ ಹೊಟ್ಟೆ ಹಸಿವು ಇತ್ತು. ಆದ್ರೂ, ನಾವು ಹೋಗಿ ಊಟ ಮಾಡಿಲ್ಲ'' ಎಂದು ಜಗನ್ನಾಥ್ ಹೇಳಿದರು.ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS