ತಮಗೆ ಹೆಣ್ಣು ಮಗು ಹುಟ್ಟಿದ ಮರು ಕ್ಷಣವೇ ಧೂಮಪಾನ ಮಾಡುವುದನ್ನು ನಿಲ್ಲಿಸುತ್ತಾರಂತೆ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್. ಹಾಗಂತ ಸ್ವತಃ ಜಗನ್ನಾಥ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ. ''ಮನಸ್ಸಿಗೆ ಬರುವ ತನಕ ಯಾರೂ ಕೂಡ ಸಿಗರೇಟ್ ಬಿಡಲು ಸಾಧ್ಯವಿಲ್ಲ'' ಎಂದು ಸಿಹಿ ಕಹಿ ಚಂದ್ರು ಕಾಮೆಂಟ್ ಮಾಡಿದರು. ಅದಕ್ಕೆ ''ನನಗೆ ಮಗಳು ಹುಟ್ಟಿದ ತಕ್ಷಣ ಬಿಟ್ಟು ಬಿಡುತ್ತೇನೆ'' ಎಂದರು ಜಗನ್ನಾಥ್. 'ಮಗಳು ಅಂತ ಯಾಕೆ.? ಹೆಣ್ಣು ಮಗು ಆಗದೆ, ಗಂಡು ಮಗು ಹುಟ್ಟಿದರೆ.?'' ಎಂಬ ಪ್ರಶ್ನೆಗಳು ಉದ್ಭವ ಆದಾಗ, ''ತಂದೆ ಆದ ಕೂಡಲೆ ಧೂಮಪಾನ ಬಿಡುತ್ತೇನೆ'' ಎಂದರು ಜಗನ್ನಾಥ್.''ಸಿಗರೇಟ್ ಸೇದಿದ ಬಳಿಕ ಮಗುವನ್ನು ಎತ್ತಿಕೊಂಡಾಗ, ಮಗು ಒಂಥರಾ ಮುಖ ಮಾಡುತ್ತೆ. ಅದನ್ನ ಮಾತ್ರ ನೋಡಲು ಸಾಧ್ಯ ಇಲ್ಲ'' ಎಂದು ತಮ್ಮ ಅನುಭವವನ್ನು ಸಿಹಿ ಕಹಿ ಚಂದ್ರು ಇದೇ ಗ್ಯಾಪ್ ನಲ್ಲಿ ಹೇಳಿಕೊಂಡರು.