ಬಿಗ್ ಬಾಸ್ ಕನ್ನಡ ಸೀಸನ್ 5 : ಸಂಯುಕ್ತ ಹೆಗ್ಡೆ ಬಗ್ಗೆ ಕಾಮೆಂಟ್ ಮಾಡಿದ ಜಗನ್ | Filmibeat Kannada

Filmibeat Kannada 2017-12-19

Views 1.9K

Bigg Boss Kannada 5: Week 9: Jaganath Chandrashekar comments about Samyuktha Hegde & Jagan also gives clarity about the relationship he had with Asita Chandrappa.



ಪ್ರತಿ ವಾರ ಒಂದಲ್ಲ ಒಂದು ಜಗಳ ಆಡದೆ ಜಗನ್ ಕಾಲ ಕಳೆದಿದ್ದೇ ಇಲ್ಲ. ಟಾಸ್ಕ್ ನಲ್ಲಂತೂ ರೋಷಾವೇಷದಿಂದ ಆಡುವ ಜಗನ್ ಅನೇಕ ಬಾರಿ ಕಣ್ಣು ದೊಡ್ಡದು ಮಾಡಿ ಕೂಗಾಡಿದ್ದಾರೆ. ಜಗನ್ ರವರ ಉಗ್ರಪ್ರತಾಪ ನೋಡಿ ''ಕೋಪ ಕಮ್ಮಿ ಮಾಡಿಕೊಳ್ಳಿ. ಆಟದಲ್ಲಿ ಆಕ್ರಮಣಕಾರಿ ಆಗಬೇಡಿ'' ಎಂದು ಸುದೀಪ್ ಕೂಡ ಅನೇಕ ಬಾರಿ ಜಗನ್ ಗೆ ಬುದ್ಧಿ ಮಾತು ಹೇಳಿದ್ದರು. ಸುದೀಪ್ ಆಡಿದ ಮಾತುಗಳು ಜಗನ್ ತಲೆಯೊಳಗೆ ಹೋದ ಕಾರಣ, ಜಗನ್ ಕೋಪಕ್ಕೆ ನಟಿ ಸಂಯುಕ್ತ ಬಲಿ ಆಗಲಿಲ್ಲ. ಒಂದು ವೇಳೆ ಸುದೀಪ್ ಹಾಗೆ ಹೇಳದೇ ಇದ್ದಿದ್ದರೆ, ಕಥೆ ಬೇರೆ ಆಗ್ತಿತ್ತು.! ''ಸಂಯುಕ್ತ ಬರ್ತಿದ್ದಂತೆ, ನಿಮ್ಮ ಮುಖದ ಮೇಲೆ ಒಂದು ಬಾಂಬ್ ಹಾಕ್ತಾರೆ. ಆ ಪ್ರಶ್ನೆ ನಿಮಗೆ ಓಕೆ ಇತ್ತಾ.?'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ ಗೆ ಸುದೀಪ್ ಪ್ರಶ್ನಿಸಿದರು.

Share This Video


Download

  
Report form
RELATED VIDEOS