'ಸಂಯುಕ್ತ' ಅನ್ನುವ ಟೈಟಲ್ ಕೇಳುತ್ತಿದ್ದ ಹಾಗೆ ಪ್ರೇಕ್ಷಕನಿಗೆ ಥಟ್ ಅಂತ ಮನಸ್ಸಿಗೆ ಬರುವುದು 1988ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 5ನೇ ಚಿತ್ರ ಸಂಯುಕ್ತ. ಸಸ್ಪೆನ್ಸ್- ಥ್ರಿಲ್ಲರ್ ವರ್ಗಕ್ಕೆ ಸೇರಿದ ಆ ಚಿತ್ರ ಅವತ್ತಿನ ಮಟ್ಟಿಗೆ ಸಾಕಷ್ಟು ಸಂಚಲನವನ್ನು ಉಂಟು ಮಾಡಿತ್ತು. ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮೇಲೆ ಶಿವ ಮೆಚ್ಚಿದ ಕಣ್ಣಪ್ಪದಂತಹ ಭಕ್ತಿ ಪ್ರಧಾನ ಚಿತ್ರದ ಸೋಲಿನ ನಿರಾಶೆಯ ನಂತರ ಬಂದ ಸಂಯುಕ್ತ ಶಿವಣ್ಣನಿಗೆ ಬೌನ್ಸ್ ಬಾಕ್ ಸೂಪರ್ ಹಿಟ್ ಸಿನಿಮಾ ಆಗಿತ್ತು. ಅದೇ ಶೀರ್ಷಿಕೆಯೊಂದಿಗೆ ಈಗ 2017ರಲ್ಲಿ ಸಂಯುಕ್ತ -2 ತೆರೆ ಕಂಡಿದೆ. ಸಹಜವಾಗಿಯೇ ಈ ಚಿತ್ರವನ್ನು 88ರ ಸಂಯುಕ್ತ ಜೊತೆ ಪ್ರೇಕ್ಷಕ ಹೋಲಿಸಿ ನೋಡುತ್ತಾನೆ. ಸಾಮಾನ್ಯ ಅಂಶಗಳ ಕಡೆ ಗಮನ ಹರಿಸಿದ್ದಾದರೆ. ಎರಡೂ ಚಿತ್ರಗಳಲ್ಲಿ ಮೂರು ಪ್ರಧಾನ ಪಾತ್ರಧಾರಿಗಳಿರುತ್ತಾರೆ.