ಸಂಯುಕ್ತ ಹೆಗ್ಡೆ ಸುದೀಪ್ ಎದುರು ಹೇಳಿದ ಹಾಗೆ ಮಾಡಿ ತೋರಿಸಿದ್ರು | Filmibeat Kannada

Filmibeat Kannada 2017-12-22

Views 4.2K

Bigg Boss Kannada 5: Week 10: What Samyuktha Hegde said in front of Sudeep in 'Kichchana Kitchen Time' did the same inside Bigg Boss house.

'ಕಿರಿಕ್ ಪಾರ್ಟಿ' ಸಿನಿಮಾ ರಿಲೀಸ್ ಆಗಿ ಇನ್ನೇನು ಒಂದು ವರ್ಷ ಆಗ್ತಾ ಬಂತು. ಈ ಒಂದು ವರ್ಷದಲ್ಲಿ ಒಳ್ಳೆಯ ವಿಷಯಗಳಿಗಿಂತ ನಟಿ ಸಂಯುಕ್ತ 'ವಿವಾದ'ಗಳಿಂದಲೇ ಸೌಂಡ್ ಮಾಡಿದ್ದು ಹೆಚ್ಚು. ಒಂದು ತಮಿಳು ಸಿನಿಮಾ ಆಫರ್ ಗಾಗಿ ಕನ್ನಡ ಚಿತ್ರಕ್ಕೆ ಕೈಕೊಡಲು ಮುಂದಾದ ಸಂಯುಕ್ತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾದರು. ಹಾಗೂ ಹೀಗೂ 'ಕಾಲೇಜ್ ಕುಮಾರ್' ಮುಗಿಸಿಕೊಟ್ಟು, ಚಿತ್ರ ಬಿಡುಗಡೆ ಆದ್ಮೇಲೂ ವಿವಾದ ಮಾತ್ರ ಸಂಯುಕ್ತ ರನ್ನ ಬಿಡಲಿಲ್ಲ. ಇದೇ ಗ್ಯಾಪ್ ನಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಭಾಗವಾಗಿರುವ 'ಕಿಚ್ಚನ್ ಟೈಮ್'ನಲ್ಲಿ ವಿಶೇಷ ಅತಿಥಿಯಾಗಿ ಬಂದ ಸಂಯುಕ್ತ ನಂತರ ನೇರವಾಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೂ ಸಂಯುಕ್ತ 'ಕಿರಿಕ್' ನಿಲ್ಲಲಿಲ್ಲ. ಸಮೀರಾಚಾರ್ಯ ಮೇಲೆ ಕೈ ಮಾಡಿ ಕಿಕ್ ಔಟ್ ಆಗಿದ್ದಾರೆ ಸಂಯುಕ್ತ. ಅಷ್ಟಕ್ಕೂ, 'ಕಿಚ್ಚನ್ ಟೈಮ್'ನಲ್ಲಿ ಭಾಗವಹಿಸಿದ್ದಾಗ ಸಂಯುಕ್ತ ಏನು ಹೇಳಿದ್ರೋ, ಅದೇ ಆಗಿದೆ.

Share This Video


Download

  
Report form
RELATED VIDEOS