ಕಿರಿಕ್ ರಾಣಿ ಸಂಯುಕ್ತ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ | Filmibeat Kannada

Filmibeat Kannada 2017-12-22

Views 1.8K

Bigg Boss Kannada 5: Week 10: Samyuktha Hegde kicked out from Bigg Boss after hitting Sameeracharya. Viewers are annoyed with Samyuktha's behavior in Bigg Boss.

ತಮಿಳು ಸಿನಿಮಾ ಆಸೆಗಾಗಿ ನಟಿ ಸಂಯುಕ್ತ ಕನ್ನಡ ಸಿನಿಮಾಗೆ ಕೈ ಎತ್ತಿದಾಗ, ಆಕೆಯ ವಿರುದ್ಧ ಯದ್ವಾತದ್ವಾ ಟ್ರೋಲ್ ಗಳು ಶುರು ಆಯ್ತು. ಅಪ್ಪಟ ಕನ್ನಡಿಗರು ಸಂಯುಕ್ತ ಮೇಲೆ ಕೋಪಿಸಿಕೊಂಡರು. ಇಷ್ಟೆಲ್ಲ ಆದರೂ ಆಗೊಂದು ಈಗೊಂದು ಸಿನಿಮಾ ಮಾಡಿಕೊಂಡಿದ್ದ ಸಂಯುಕ್ತ ವೃತ್ತಿ ಬದುಕಿಗೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಾದ ರಾದ್ಧಾಂತ ಒಂದು ಕಪ್ಪು ಚುಕ್ಕೆ ಅಂದರೂ ತಪ್ಪಾಗಲ್ಲ. ವಿಶೇಷ ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದ ಸಂಯುಕ್ತ, ಅಷ್ಟೇ ಗೌರವದಿಂದ ಹೊರಗೆ ಬರುವ ಬದಲು.. ಸಮೀರಾಚಾರ್ಯ ಮೇಲೆ ಕೈ ಮಾಡಿ 'ಬಿಗ್ ಬಾಸ್' ಮನೆಯಿಂದ 'ಕಿಕ್ ಔಟ್' ಆಗಿದ್ದಾರೆ. ರಿಯಾಲಿಟಿ ಶೋನಲ್ಲಿ ಸಂಯುಕ್ತ ರವರ ಈ ನಡವಳಿಕೆ ವೀಕ್ಷಕರಿಗೆ ಬೇಸರ ತಂದಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಸಂಯುಕ್ತ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ.''ಸಂಯುಕ್ತ ಹೆಗ್ಡೆ ನಿಜವಾಗಲೂ 'ಕಿರಿಕ್' ಪಾರ್ಟಿ. ಟಿ.ಆರ್.ಪಿಗಾಗಿ ಈ ತರಹ ವರ್ತನೆ ತೋರಿ ಗೌರವ ಕಳೆದುಕೊಂಡಿದ್ದಾರೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

Share This Video


Download

  
Report form
RELATED VIDEOS