Kannada Actor, Challenging Star Darshan's Chow Chow Bath video goes viral.
ವೈರಲ್ ಆಯ್ತು ಚಾಲೆಂಜಿಂಗ್ ಸ್ಟಾರ್ ಮಾಡಿದ 'ಚೌಚೌ ಬಾತ್'! ತೆರೆಮೇಲೆ ಅಬ್ಬರಿಸುವ ನಟ-ನಟಿಯರ ವೈಯಕ್ತಿಕ ಜೀವನ ಹೇಗಿರುತ್ತೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇರುತ್ತೆ. ಇಂತಹ ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪರೂಪದ ಒಂದು ವಿಡಿಯೋ ನೋಡುವ ಅವಕಾಶ ಸಿಕ್ಕಿದೆ. ದರ್ಶನ್ ಅವರು ತಮ್ಮ ಬಿಡುವು ಸಿಕ್ಕಾಗ ಸ್ನೇಹಿತರು ಜೊತೆ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇಂತಹ ಸಮಯವೊಂದರಲ್ಲಿ ದಾಸ ಅಡುಗೆ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹೌದು, ದರ್ಶನ್ ಅವರು ಚೌಚೌ ಬಾತ್ ತಯಾರಿಸಿದ್ದಾರೆ. ದರ್ಶನ್ ಅವರ ಈ ಚೌಚೌ ಬಾತ್ ವಿಡಿಯೋನ್ನಿಟ್ಟುಕೊಂಡು ಅಭಿಮಾನಿಗಳು ಮತ್ತೊಂದು ವಿಡಿಯೋ ಸಿದ್ದ ಮಾಡಿದ್ದಾರೆ.ಹೀಗೆ ದರ್ಶನ ರವರು ಸಮಯ ಸಿಕ್ಕಾಗ ತಮ್ಮ ಸ್ನೇಹಿತರ ಜೊತೆ ಬಿಂದಾಸ್ ಆಗಿ ಇರ್ತಾರೆ. ಮತ್ತಷ್ಟು ಸ್ಯಾಂಡಲ್ ವುಡ್ ಸುದ್ದಿಗಳಿಗೆ ನೋಡ್ತಾ ಇರಿ ಫಿಲ್ಮಿಬೀಟ್ ಕನ್ನಡ ಜೊತೆಗೆ ಸಬ್ಸ್ಕ್ರೈಬ್ ಮಾಡಿ