ಹೊಸ ಮೆಸ್ಟ್ರೋ ಎಡ್ಜ್ 110 ಬಿಎಸ್ 6 ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

DriveSpark Kannada 2020-09-14

Views 5

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಮೆಸ್ಟ್ರೋ ಎಡ್ಜ್ 110 ಬಿಎಸ್ 6 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.60,950ಗಳಾಗಿದೆ.

ಮೆಸ್ಟ್ರೋ ಎಡ್ಜ್ 110 ಬಿಎಸ್ 6 ಸ್ಕೂಟರ್ ಹಲವಾರು ಫೀಚರ್ ಹಾಗೂ ಅಪ್ ಡೇಟ್ ಮಾಡಲಾದ ಎಂಜಿನ್ ಅನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಟಾಪ್-ಎಂಡ್ ಮಾದರಿಯಾದ ಅಲಾಯ್ ವ್ಹೀಲ್ - ಎಫ್‌ಐ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.62,450ಗಳಾಗಿದೆ. ಈ ಎರಡೂ ಮಾದರಿಗಳು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿವೆ.

Share This Video


Download

  
Report form
RELATED VIDEOS