ಧನಂಜಯ್ 'ಕಿಲ್ಲಿಂಗ್' ಲುಕ್ ಗೆ ಅಭಿಮಾನಿಗಳಿಂದ 'ಡೆಡ್ಲಿ' ಕಾಮೆಂಟ್ಸ್.! ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಪ್ರಶಂಸೆ ಪಡೆದುಕೊಂಡಿದೆ. ಶಿವಣ್ಣ ಖಡಕ್ ಲುಕ್ ಗೆ ಕ್ಲೀನ್ ಬೌಲ್ಡ್ ಆಗಿರುವ ಚಿತ್ರಪ್ರೇಮಿಗಳು ಚಿತ್ರದ 'ಡೆಡ್ಲಿ' ವಿಲನ್ ಗೂ ಅಷ್ಟೇ ಫಿದಾ ಆಗಿದ್ದಾರೆ. ಹೌದು, 'ಟಗರು' ಚಿತ್ರದಲ್ಲಿ 'ಡಾಲಿ' ಆಗಿ ಅಬ್ಬಿರಿಸಿರುವ ಧನಂಜಯ್, ಟೀಸರ್ ನಲ್ಲಿ ಘರ್ಜಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದ ಸ್ಪೆಷಲ್ ಸ್ಟಾರ್ ಈಗ ಟೀಸರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 'ಟಗರಿ'ನ ಅಖಾಡದಲ್ಲಿ 'ರಕ್ತ ಚರಿತ್ರೆ' ಸೃಷ್ಟಿಸಿರುವ ಧನಂಜಯ್ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ 'ಡೆಡ್ಲಿ' ಕಾಮೆಂಟ್ ಗಳೇನು. ಇದುವರೆಗೂ ಲವರ್ ಬಾಯ್ ಪಾತ್ರಗಳಲ್ಲಿ ಹೆಚ್ಚು ಮಿಂಚಿದ್ದ ಧನಂಜಯ್ ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ರಗಡ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಷ್ಟೇ ಅಲ್ಲದೇ ಧನಂಜಯ್ ಈ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿರುವುದು ವಿಶೇಷ.
Kannada Fans are appreciate to the Tagaru Teaser and Dhananjay. The movie features Shiva Rajkumar, Dhananjaya, Vasista Simha and Others.