ಅಯ್ಯೋ ಬದಲಾದ್ರು ಭಟ್ರು, ನೋಡಿದ್ರಾ ಅವ್ರ ನಯಾ ಲುಕ್ಕು.! ನಮ್ಮ ಯೋಗರಾಜ್ ಭಟ್ರನ್ನ ಯಾರಾದ್ರು ಇತ್ತೀಚಿಗೆ ನೋಡಿದ್ರಾ ಅಂದ್ರೆ, ಕೆಲವರು ಇಲ್ಲಾ ಅಂತಿದ್ದಾರೆ. ಮತ್ತೆ ಕೆಲವರು ನಿನ್ನೆ ತಾನೆ 'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ವಿ ಅಂತಿದ್ದಾರೆ. ಹೌದು, ನೀವು ಯೋಗರಾಜ್ ಭಟ್ಟರನ್ನ ನೋಡಿರ್ತಿರಾ. ಆದ್ರೆ ಅವರ ಹೊಸ ಲುಕ್ ಅನ್ನ ನೋಡಿರಲ್ಲ ಬಿಡಿ. ಯಾಕಂದ್ರೆ ಭಟ್ಟರು ಬದಲಾಗಿದ್ದಾರೆ. ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಮಾತ್ರ ಬದಲಾಣೆ ಅಂತ ನೀವು ಅಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ಭಟ್ಟರು ತಮ್ಮದೇ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಸಾದಾ ಸೀದಾ ಇದ್ದ ಯೋಗರಾಜರು ಈಗ ತಮ್ಮ ಹೇರ್ ಸ್ಟೈಲ್ ಗೆ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಹೊಸ ಜಮಾನ ನಾವು ಒಂದಿಷ್ಟು ಚೈಂಜ್ ಆಗೋಣ ಅಂತ ಸ್ಪೈಕ್ ಹೇರ್ ಸ್ಟೈಲ್ ಮಾಡಿಕೊಂಡು ನಿನ್ನೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದರು.