ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ 'ಕರುನಾಡ ಚಕ್ರವರ್ತಿ' . ಒಬ್ಬ ನಟ ಸ್ಟಾರ್ ಆಗಬೇಕಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅದಕ್ಕೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಅಂತಹ ನಟರು 'ಅಭಿಮಾನಿಗಳೇ ನಮ್ಮ ದೇವ್ರು', 'ಅಭಿಮಾನಿಗಳೇ ನಮ್ಮ ಪ್ರಾಣ' ಎನ್ನುತ್ತಿದ್ದರು.
ಈಗ ಇದೇ ಮಾತನ್ನ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ. 'ಟಗರು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ್ದಾರೆ.ಹಾಗಿದ್ರೆ, ಸ್ಯಾಂಡಲ್ ವುಡ್ ಅಭಿಮಾನಿಗಳ ಬಗ್ಗೆ ಶಿವಣ್ಣ ಏನಂದ್ರು? ನಟರು ಹೇಗಿರಬೇಕು ಎಂದು ಕಿವಿಮಾತು ಹೇಳಿದ್ರು.''ಅಭಿಮಾನಿಗಳಿಗೋಸ್ಕರ ನಾವು ಏನು ಬೇಕಾದ್ರೆ ಮಾಡುವುದಕ್ಕೆ ರೆಡಿಯಾಗಿದ್ದೀವಿ. ಅವರ ಪ್ರೋತ್ಸಾಹವೇ ನಾವು ಇಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ'' -'ನಾವು ಮಾತ್ರವಲ್ಲ ಇಂಡಸ್ಟ್ರಿಯಲ್ಲಿರುವ ಎಲ್ಲರೂ ಅಷ್ಟೇ ಅಭಿಮಾನಿಗಳನ್ನ ಮರೆತರೇ ಅವರು ಗೋವಿಂದ. ಯಾವತ್ತು ಅವರನ್ನ ಮರೆಯಬಾರದು. ಸ್ನೇಹಿತರ ರೀತಿ ಇರಬೇಕು'' - ಶಿವರಾಜ್ ಕುಮಾರ್, ನಟ
Hatrick Hero, Kannada Actor Shiva Rajkumar Speak about his Fans in Tagaru Teaser Release Programme.