ಬಿಗ್ ಬಾಸ್ ಕನ್ನಡ ಸೀಸನ್ 5 : ಗಾಯತ್ರಿ ಮಂತ್ರಕ್ಕೆ ಅವಮಾನ ಮಾಡಿದ ಸಮೀರ್ ಆಚಾರ್ಯ

Filmibeat Kannada 2017-10-25

Views 1

Insult to Gayatri mantra in Bigg Boss Kannada Season 5. Brahmin community expressing angry against contestant Sameeracharya who sung Gayatri mantra in rap style.

ಬಿಗ್ ಬಾಸ್ ಕನ್ನಡ ಅವತರಣಿಕೆಯ ಐದನೇ ಸೀಸನ್ ನಲ್ಲಿ ಭಾಗವಹಿಸಿರುವ ಸಮೀರಾಚಾರ್ಯ ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ವಾರದ ಹಿಂದೆಯೇ ನಡೆದ ಈ ಘಟನೆಯ ವಿಡಿಯೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು, ಬ್ರಾಹ್ಮಣ ಸಮುದಾಯದ ಸಿಟ್ಟಿಗೆ ತುತ್ತಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂದರೆ, ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ಜತೆಗೆ ಜೋರಾಗಿ ಗಾಯತ್ರಿ ಮಂತ್ರವನ್ನು ಹಾಡಿನಂತೆ ಹಾಡಿದ್ದಾರೆ ಸಮೀರಾಚಾರ್ಯ. ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಂಗೀತದಂತೆ ಕೆಲವು ಶಬ್ದಗಳನ್ನು ಕೂಡ ಮಾಡಲಾಗಿದೆ. ಕೊನೆಯಲ್ಲಿ ಯಾ ಇಲಾಹಿ ಇಲ್ಲಲ್ಲಾ ಎಂದು ಮತ್ತೇನೋ ಸೇರಿಸಿಕೊಂಡು ಹಾಡಿದ್ದಾರೆ. "ಅಲ್ಲಿದ್ದ ಉಳಿದ ಸ್ಪರ್ಧಿಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಗಾಯತ್ರಿ ಮಂತ್ರವನ್ನು ಹೀಗೆ ಹೇಳಬೇಕು ಎಂದು ಶಾಸ್ತ್ರಗಳಲ್ಲಿ ಇರುವುದನ್ನು ತಿಳಿದೂ ಜೋರಾಗಿ ಮಂತ್ರ ಹೇಳಿದ್ದು, ಅದಕ್ಕೆ ತಾಳ ಹಾಕಿದ್ದು, ಆ ನಂತರ ಇಸ್ಲಾಂನಲ್ಲಿ ಬರುವಂತೆ ಏನನ್ನೋ ಸ್ಮರಣೆ ಮಾಡಿದ್ದು ಅಕ್ಷಮ್ಯ" ಎನ್ನುತ್ತಾರೆ ಧಾರ್ಮಿಕ ಚಿಂತಕರಾದ ಭೀಮಸೇನಾಚಾರ್.

Share This Video


Download

  
Report form
RELATED VIDEOS