ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಯಲ್ಲಿ ಹಾಲಿಗಾಗಿ ಕೋಲಾಹಲ | FIlmibeat Kannada

Filmibeat Kannada 2017-11-06

Views 1K

Bigg Boss Kannada 5: Week 3: Kiccha Sudeep spoke about the issue related to Milk Packets hidden by Dayal Padmanabhan and Anupama Gowda.

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.! ಯಾವ ವಿಷಯಕ್ಕೆ ಭಿನ್ನಾಭಿಪ್ರಾಯ ಆಗುತ್ತೋ, ಇಲ್ವೋ... ಗದ್ದಲ-ಗಲಾಟೆ ನಡೆಯುತ್ತೋ, ಇಲ್ವೋ... ಆದ್ರೆ, ಊಟದ ವಿಚಾರಕ್ಕೆ ಮಾತ್ರ 'ಬಿಗ್ ಬಾಸ್' ಮನೆಯಲ್ಲಿ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತೆ. ಮೇಘ ಒಂದು ಆಪಲ್ ತೆಗೆದುಕೊಂಡಿದ್ದಕ್ಕೆ, ತೇಜಸ್ವಿನಿ ಗರಂ ಆಗಿದ್ದರು. ತಮ್ಮ ಪಾಲಿನ ಹಣ್ಣನ್ನ ಜಯಶ್ರೀನಿವಾಸನ್ ತೆಗೆದುಕೊಂಡು ಹೊರಟಾಗ ಕೃಷಿ ಕೂಗಾಡಿದ್ದರು. ಈಗ 'ಹಾಲಿ'ನ ವಿಚಾರಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ ನಡೆದಿದೆ. ಸಮೀರಾಚಾರ್ಯ ಅವರು ಒಂದು ಲೋಟ ಹಾಲು ಕೇಳಿದ್ದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಪಂಚಾಯತಿಯೇ ನಡೆದು ಹೋಗಿದೆ. ಇದೇ ವಿಚಾರಕ್ಕೆ ಜಗನ್, ಆಶಿತಾ, ದಯಾಳ್ ಸೇರಿದಂತೆ ಕೆಲವರು ವಾಗ್ವಾದ ನಡೆಸಿದರು. ''ಹಾಲು ಇರೋದೇ ಕಮ್ಮಿ. ಅದರಲ್ಲಿ ಒಬ್ಬರೇ ಒಂದು ಲೋಟ ಹಾಲು ಕುಡಿದರೆ ಹೇಗೆ'' ಎಂಬುದೇ ಪಂಚಾಯತಿಯ ವಿಷಯ ಆಗಿತ್ತು. ಆದ್ರೆ, ನಾಲ್ಕು ಪ್ಯಾಕೆಟ್ ಹಾಲನ್ನು ಬಚ್ಚಿಟ್ಟು (ಎತ್ತಿಟ್ಟು) ಹಾಲಿನ ವಿಚಾರಕ್ಕೆ ಪಂಚಾಯತಿ ನಡೆಸಿದ ಸೆಲೆಬ್ರಿಟಿ ಸ್ಪರ್ಧಿಗಳನ್ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತರಾಟೆಗೆ ತೆಗೆದುಕೊಂಡರು.

Share This Video


Download

  
Report form
RELATED VIDEOS