News Cafe | 300 Electric Buses Will Hit The Roads Of Bengaluru On Aug 15 | HR Ranganath | Aug 12, 2022

Public TV 2022-08-12

Views 10

ಡಿಸೇಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಎಂಟಿಸಿ ತನ್ನ ರಜತ ಮಹೋತ್ಸವದ ಸಂದರ್ಭ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದೆ. ಬಿಎಂಟಿಸಿಯೂ ಕೇಂದ್ರ ಸರ್ಕಾರದ ಫೇಮ್ 2 ನಲ್ಲಿ 300ಕ್ಕೂ ಹೆಚ್ಚು ಬಸ್‍ಗಳನ್ನ ರಸ್ತೆಗಿಳಿಸಲಿದ್ದು, ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳ ಸಂಚಾರ ಆರಂಭವಾಗಲಿದೆ. ಇದೇ ಆಗಸ್ಟ್ 15ಕ್ಕೆ 75 ಬಸ್‍ಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದು, ಇನ್ನೊಂದು ತಿಂಗಳಲ್ಲಿ ಉಳಿದ 230 ಬಸ್‍ಗಳ ಸೇವೆ ಸಿಗಲಿವೆ. ಇನ್ನು ಹೊಸ ಮಾದರಿಯ ಬಸ್‍ಗಳು 12 ಮೀಟರ್ ಉದ್ದದ ನಾನ್ ಎಸಿ ಬಸ್‍ಗಳಾಗಿದ್ದು, 41 ಆಸನ ಹೊಂದಿರಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಸಂಚಾರ ಮಾಡಬಹುದು. ಸಾಮಾನ್ಯ ಬಿಎಂಟಿಸಿ ಬಸ್‍ಗಳಲ್ಲಿನ ದರವೇ ಈ ಬಸ್‍ಗಳಲ್ಲಿ ಇರಲಿದೆ. ಪಾಸ್‍ಗಳಿಗೂ ಅನುಮತಿ ಇರಲಿದೆ. ಬಸ್‍ಗಳ ಕಲರ್ ಕೂಡ ಪ್ರಯಾಣಿಕರನ್ನ ಆಕರ್ಷಣೆ ಗೊಳಿಸಲಿದೆ.

#publictv #newscafe #hrranganath

Share This Video


Download

  
Report form