ಕ್ಲಾಸಿಕ್ ಲೆಜೆಂಡ್ ಮಾಲೀಕತ್ವದ ಅಡಿಯಲ್ಲಿ ಯೆಜ್ಡಿ ಬ್ರ್ಯಾಂಡ್ ಹೊಸ ರೂಪದಲ್ಲಿ ಮರಳಿ ಮಾರುಕಟ್ಟೆ ಪ್ರವೇಶಿಸಿದೆ. ಯೆಜ್ಡಿ ಬ್ರ್ಯಾಂಡ್ ಅಡಿಯಲ್ಲಿ ಒಟ್ಟು ಮೂರು ಹೊಸ ಮೋಟಾರ್‌ಸೈಕಲ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಮಾದರಿಗಳನ್ನು ಪರಿಚಯಿಸಲಾಗಿದೆ. ಹೊಸ ಮೋಟಾರ್‌ಸೈಕಲ್‌ಗಳು ಆಧುನಿಕ ತಾಂತ್ರಿಕ ವೈಶಿಷ್ಟ್ಯತೆಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ 1.98 ಲಕ್ಷ ಬೆಲೆ ಹೊಂದಿದ್ದು, ಹೊಸ ಮೋಟಾರ್‌ಸೈಕಲ್‌ಗಳ ಕುರಿತಾಗಿ ನಮ್ಮ ಮೊದಲ ಅನಿಸಿಕೆಯನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಹೊಸ ಮೋಟಾರ್‌ಸೈಕಲ್‌ಗಳು ಗ್ರಾಹಕರ ಬೇಡಿಕೆಯೆಂತೆ ಸಾಕಷ್ಟು ವಿಭಿನ್ನತೆ ಹೊಂದಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಹೇಗೆ ಪೈಪೋಟಿ ನೀಡಲಿವೆ ಎನ್ನುವುದನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ.