ಕವಾಸಕಿ ಕಂಪನಿಯು ತನ್ನ ಆಧುನಿಕ-ಕ್ಲಾಸಿಕ್ ಸರಣಿಯಲ್ಲಿ ಹೊಸ ಎಂಟ್ರಿ ಲೆವೆಲ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಕಂಪನಿಯು ಮುಂದಿನ ವರ್ಷ ಭಾರದಲ್ಲಿ ಡಬ್ಲ್ಯು 175 ರೆಟ್ರೊ-ಕ್ಲಾಸಿಕ್ ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.
ಕಂಪನಿಯು ಈ ಬೈಕನ್ನು 90%ನಷ್ಟು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಎಂದು ಹೇಳಲಾಗಿದೆ. ಕವಾಸಕಿ ಕಂಪನಿಯು ಈ ಬೈಕಿಗೆ ರೂ.1.50 ಲಕ್ಷ ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.
ಡಬ್ಲ್ಯು 175 ಬೈಕಿನಲ್ಲಿ 177 ಸಿಸಿಯ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾವುದು. ಈ ಎಂಜಿನ್ 7500ಆರ್ ಪಿನಲ್ಲಿ 13 ಬಿಹೆಚ್ ಪಿ ಪವರ್ ಹಾಗೂ 6000 ಆರ್ ಪಿಎಂನಲ್ಲಿ 13.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗುವುದು.