ಹ್ಯುಂಡೈ ಕಂಪನಿಯ ಎನ್-ಲೈನ್ ಪರ್ಫಾರ್ಮೆನ್ಸ್ ಕಾರು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ 2021ರ ಮಧ್ಯ ಭಾಗದಲ್ಲಿ ಎನ್-ಲೈನ್ ಭಾರತಕ್ಕೆ ಕಾಲಿಡಲಿದೆ.
ಐ 20 ಎನ್-ಲೈನ್'ನ ಮೊದಲ ಕಾರ್ ಆಗಿರಲಿದೆ ಎಂದು ಹೇಳಲಾಗಿದೆ. ಹ್ಯುಂಡೈನ ಪರ್ಫಾಮೆನ್ಸ್ ಎನ್-ಲೈನ್ ಹಾಗೂ ಎನ್ ಎಂಬ ಎರಡು ಸರಣಿಗಳನ್ನು ಹೊಂದಿದೆ. ಎನ್ ಲೈನ್ ಮಾದರಿ ಕಾರುಗಳು ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ ಇಂಟಿರಿಯರ್, ಎಕ್ಸ್ ಟಿರಿಯರ್ ಅಪ್ ಡೇಟ್, ಸಸ್ಪೆಂಷನ್ ಮಾಡಿಫಿಕೇಶನ್'ಗಳನ್ನು ಹೊಂದಿರುತ್ತವೆ.
ಇನ್ನು ಎನ್ ಸರಣಿಯ ಕಾರುಗಳು ಏರೋ ಕಿಟ್, ಅಪ್‌ಗ್ರೇಡ್ ಮಾಡಲಾದ ಚಾಸಿಸ್, ಸಸ್ಪೆಂಷನ್, ಬ್ರೇಕ್, ಶಕ್ತಿಶಾಲಿಯಾದ ಎಂಜಿನ್‌ಗಳನ್ನು ಹೊಂದಿರುತ್ತವೆ. ಹ್ಯುಂಡೈ ಇಂಡಿಯಾ ಎನ್-ಲೈನ್ ಸರಣಿಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
ಹ್ಯುಂಡೈ ಎನ್-ಲೈನ್ ಪರ್ಫಾರ್ಮೆನ್ಸ್ ಕಾರುಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.