ಹೊಳೆಯುವ ಚರ್ಮ ಯಾರಿಗೆ ತಾನೇ ಬೇಡ?, ಆದರೆ, ನಿತ್ಯ ಒತ್ತಡ, ಕೆಲಸ, ಮನೆ, ಕುಟುಂಬ ಎಲ್ಲದರ ನಡುವೆ ನಮ್ಮ ಸೌಂದರ್ಯದ ಬಗ್ಗೆ ಕಾಳಜಿ ಅಥವಾ ಮನೆಮದ್ದಿನ ಪ್ರಯೋಗಗಳನ್ನು ಮಾಡಲು ಆಗವುದೇ ಇಲ್ಲ. ತ್ವಚೆಯ ಕಾಳಜಿಗೆ ನಾವು ಎಷ್ಟೇ ವೇಳಾಪಟ್ಟಿ ಹಾಕಿಕೊಂಡರೂ ಒಂದು ಅಥವಾ ಎರಡು ದಿನಗಳ ನಂತರ ಮತ್ತೆ ನಿರ್ಲಕ್ಷ್ಯ ಮಾಡುವುದು ಬಹುತೇಕರ ಅಭ್ಯಾಸವಾಗಿರುತ್ತದೆ. ಅಲ್ಲದೇ, ಸಾಕಷ್ಟು ರಾಸಾಯನಿಕಗಳಿರುವ ಕ್ರೀಂ, ಸೋಪು, ಲೋಷನ್‌ಗಳು ದೀರ್ಘ ಕಾಲದಲ್ಲಿ ತ್ವಚೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಿಜವಾಗಿಯೂ, ನಮ್ಮ ಚರ್ಮದ ಹೊಳಪು ಇರುವುದು ಆರೋಗ್ಯಕರ ಜೀವನಶೈಲಿ ಮತ್ತು ಆಹಾರಕ್ರಮದ ಮೇಲೆ. ಹಾಗಿದ್ದರೆ, ನಮ್ಮ ದಿನಚರಿಗೆ ಅನುಗುಣವಾಗಿ ವಿಭಿನ್ನವಾಗಿ ನಾವು ತ್ವಚೆಯ ಕಾಳಜಿ ಹೇಗೆ ಮಾಡಬಹುದು?, ಹೊಳೆಯುವ ಚರ್ಮಕ್ಕಾಗಿ ಆರೋಗ್ಯಕರ ಆಹಾರದ ಮಹತ್ವ ಏನು?, ನಮ್ಮ ನಿತ್ಯದ ಆಹಾರ ಕ್ರಮದಲ್ಲೇ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಗೆ ಏನು ಮಾಡಬಹುದು? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ನಿಮಗಾಗಿ ನಿತ್ಯ ಸಮಯಾನುಸಾರ ಸೇವಿಸಬಹುದಾದ ಆಹಾರದ ಚಾರ್ಟ್ ಅನ್ನು ಸಿದ್ಧಪಡಿಸಿದ್ದೇವೆ.