ಆಲೂಗಡ್ಡೆಗಳು ಶೀತದಿಂದ ಕೂಡಿದ್ದು, ಇವುಗಳ ಹೆಚ್ಚಿನ ಸೇವನೆ ಮಾಡಿದರೆ, ಕೈ ಕಾಲುಗಳು ಹಿಡಿದುಕೊಳ್ಳುತ್ತವೆ. ಇದರ ಸಹವಾಸವೇ ಬೇಡಪ್ಪಾ ಎಂದು ಮೂಗು ಮುರಿದುಕೊಂಡು ದೂರ ಹೋಗುವವರೇ ಹೆಚ್ಚು. ಆದರೆ ಆಲೂಗಡ್ಡೆಯ ನಿತ್ಯ ನಿಯಮಿತ ಸೇವನೆಯಿಂದ ತಮ್ಮ ದೇಹಕ್ಕೆ ಉಂಟಾಗುವ ಪ್ರಯೋಜನಗಳ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆಲೂಗಡ್ಡೆಗಳಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಬಹಳಷ್ಟು ಸಹಕಾರಿಯಾಗಿ ಕೆಲಸ ಮಾಡುತ್ತವೆ. ಆಲೂಗಡ್ಡೆ ಜ್ಯೂಸ್ ನಿಂದ ಉಂಟಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸವಿವರ ಮಾಹಿತಿಯನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ.