ಬಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡೆಲೆಯಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದ್ದು ಇದನ್ನು ಅತ್ಯಂತ ಆರೋಗ್ಯಕರ ಸ್ನ್ಯಾಕ್ಸ್ ಆಗಿ ಪರಗಣಿಸಬಹುದು.
ನೆಲಗಡಲೆಯನ್ನು ಕೆಲವರಿಗೆ ಬೇಯಿಸಿ ತಿನ್ನಲು ಇಷ್ಟ, ಇನ್ನು ಕೆಲವರಿಗೆ ಹುರಿದು ತಿನ್ನಲು ಇಷ್ಟ. ಇನ್ನು ಮನೆಯಲ್ಲಿ ಉಪ್ಪು, ಅವಲಕ್ಕಿ ಮಾಡುವಾಗ ಸ್ವಲ್ಪ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುವುದು.
ಆದರೆ ಎಂದಾದರೂ ಇದನ್ನು ನೆನೆಸಿ ತಿಂದಿದ್ದೀರಾ? ಬಹುಶಃ ನೀವು ಆ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವೆಂದು ಗೊತ್ತು. ಇನ್ನು ಕೆಲವರ ಬಳಿ ದಿನಾ ಬಾದಾಮಿ ತಿನ್ನುವಷ್ಟು ಆರ್ಥಿಕ ಸ್ಥಿತಿಯೂ ಇರುವುದಿಲ್ಲ. ಆದರೆ ನೆಲಗಡಲೆಯನ್ನು ಬಡವ ಇರಲಿ, ಶ್ರೀಮಂತ ಇರಲಿ ಕೊಂಡು ತಿನ್ನಬಹುದು.
ಇಲ್ಲಿ ನಾವು ಬಾದಾಮಿಯನ್ನು ನೆನೆ ಹಾಕಿ ತಿನ್ನುವುದರಿಂದ ದೊರೆಯುವ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ, ಇದನ್ನು ಮಕ್ಕಳಿಗೆ ಕೊಟ್ಟರೆ ಅವರ ಬೆಳವಣಿಗೆಗೆ ತುಂಬಾ ಸಹಕಾರಿ.