ಅಂಗಡಿಯಿಂದ ಮೊಟ್ಟೆ ತಂದಾಗ ಅದು ತಾಜಾ ಮೊಟ್ಟೆಯೇ? ಕೋಳಿ ಈ ಮೊಟ್ಟೆ ಇಟ್ಟು ಎಷ್ಟು ದಿನಗಳಾಗಿರಬಹುದು? ಎಂಬ ಪ್ರಶ್ನೆ ಮಾಡುವುದು ಸಹಜ. ಕೆಲವೊಂದು ಮೊಟ್ಟೆ ಪ್ಯಾಕ್‌ಗಳಲ್ಲಿ ಅದರ ಎಕ್ಸ್‌ಪೆರಿ ಡೇಟ್ ಇದ್ದರೂ ಕೂಡ ಅವುಗಳನ್ನು ತಂದು ಒಡೆದು ನೋಡುವವರಿಗೆ ಅದು ಚೆನ್ನಾಗಿದೆಯೇ, ಇಲ್ಲಾ ಹಾಳಾಗಿದೆಯೇ ಎಂಬ ಸಂಶಯವಿದ್ದೇ ಇರುತ್ತದೆ.
ಮೊಟ್ಟೆ ತಾಜಾತನ ಪರೀಕ್ಷಿಸಲು ಬರೀ ಅದರ ಎಕ್ಸ್‌ಪೆರಿ ಡೇಟ್ ಪರೀಕ್ಷೆ ಮಾಡಿದರಷ್ಟೇ ಸಾಲದು, ಅದನ್ನು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ತುಂಬಾ ಹಳೆಯದಾದ ಮೊಟ್ಟೆಗಳು ಹಾಳಾಗುತ್ತವೆ, ಇಂಥ ಮೊಟ್ಟೆ ತಿಂದಾಗ ಹೊಟ್ಟೆ ಹಾಳಾಗಬಹುದು.
ಇನ್ನು ಹಾಳಾದ ಮೊಟ್ಟೆ ಒಡೆದರೆ ಅದು ಬೀರುವ ದುರ್ವಾಸನೆಗೆ ಮತ್ತೆ ಮೊಟ್ಟೆ ತಿನ್ನಬೇಕೆಂದು ಅನಿಸುವುದೇ ಇಲ್ಲ, ಅಷ್ಟೊಂದು ಅಸಹ್ಯಕರವಾಗಿರುತ್ತದೆ. ಇಲ್ಲಿ ನಾವು ಮೊಟ್ಟೆಯ ತಾಜಾತನ ಪರೀಕ್ಷಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ.