ಮಾತ್ತೆತ್ತಿದ್ರೆ ಸಾಕು... ''ನಿಜವಾಗ್ಲೂ ಹೇಳ್ತೀನಿ, ಸತ್ಯವಾಗ್ಲೂ ಹೇಳ್ತೀನಿ, ನಮ್ಮ ತಾಯಾಣಿ ಹೇಳ್ತೀನಿ...'' ಅಂತ ಮಾತು ಶುರು ಮಾಡುವ 'ಬಿಗ್ ಬಾಸ್' ಸ್ಪರ್ಧಿ ದಿವಾಕರ್.
ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಿವಾಕರ್ ಅನೇಕ ರಾದ್ಧಾಂತಗಳಿಗೆ ನಾಂದಿ ಹಾಡಿದ್ದಾರೆ, ಸಾಕ್ಷಿ ಆಗಿದ್ದಾರೆ. ''ಪದೇ ಪದೇ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತವನ್ನ ತಲೆಯಲ್ಲಿ ಇಟ್ಟುಕೊಂಡು ಆಟ ಆಡಿರುವ ದಿವಾಕರ್ ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಫೈನಲಿಸ್ಟ್.
ಫೈನಲ್ ತಲುಪಿರುವ ಟಾಪ್ 5 ಸ್ಪರ್ಧಿಗಳ ಪೈಕಿ ದಿವಾಕರ್ ಕೂಡ ಒಬ್ಬರು. ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ದಿವಾಕರ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರಾ.? 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ದಿವಾಕರ್ ಈ ಬಾರಿ ವಿಜೇತರಾಗುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ಆದ್ರೆ, ಅದಕ್ಕೂ ಮುನ್ನ 'ಬಿಗ್ ಬಾಸ್' ಮನೆಯೊಳಗಿನ ದಿವಾಕರ್ ಜರ್ನಿ ಕುರಿತು ಸಣ್ಣ ರೌಂಡಪ್
Diwakar is a Finalist in Bigg Boss Kannada 5 reality show. Will Diwakar manage to win #BBK5 trophy.? Lets wait and Watch.