'ಬಿಗ್ ಬಾಸ್' ಮನೆಯೊಳಗೆ ಕಾಲಿಡುವ ಮುನ್ನ ಚಂದನ್ ಶೆಟ್ಟಿ ಅಂದ್ರೆ ಎಲ್ಲರಿಗೂ ಥಟ್ ಅಂತ ನೆನಪಾಗುತ್ತಿದ್ದದ್ದು 3 ಪೆಗ್ ಹಾಡು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಹೋದ್ಮೇಲೆ ಚಂದನ್ ಶೆಟ್ಟಿ ತಮ್ಮ ತರಹೇವಾರಿ ಹಾಡುಗಳು, ಪ್ರತಿಭೆ, ವ್ಯಕ್ತಿತ್ವದಿಂದ ಜನಪ್ರಿಯತೆ ಗಳಿಸಿದರು.
'ಬಿಗ್ ಬಾಸ್' ಮನೆಯೊಳಗೆ ಯಾವುದೇ ಸಂಗೀತ ವಾದ್ಯ ಇಲ್ಲ. ಆದ್ರೆ, ಕೈಗೆ ಸಿಕ್ಕ ಪೀಠೋಪಕರಣಗಳನ್ನಿಟ್ಟುಕೊಂಡು ಹಾಡುಗಳನ್ನ ಸಂಯೋಜಿಸಿ, ಎಲ್ಲರನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ, ಕೂತಲ್ಲೇ ತಲೆದೂಗುವಂತೆ ಮಾಡುತ್ತಿದ್ದವರು ಚಂದನ್ ಶೆಟ್ಟಿ.
ತಮ್ಮ ಭಿನ್ನ-ವಿಭಿನ್ನ ಹಾಡುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಹೊಂದಿರುವ ಚಂದನ್ ಶೆಟ್ಟಿ ಇದೀಗ 'ಬಿಗ್ ಬಾಸ್ ಕನ್ನಡ-5' ಗೆಲ್ಲುವ ನೆಚ್ಚಿನ ಸ್ಪರ್ಧಿ. ಅಷ್ಟಕ್ಕೂ, ಚಂದನ್ ಶೆಟ್ಟಿ ಮೇಲೆ ವೀಕ್ಷಕರಿಗೆ ಇಷ್ಟೊಂದು ಪ್ರೀತಿ ಹುಟ್ಟಲು ಕಾರಣ ಏನು.?
Kannada Rapper Chandan Shetty is a Finalist in Bigg Boss Kannada 5 reality show. Will Chandan Shetty manage to win #BBK5 trophy.? Lets wait and Watch.