ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.! | Filmibeat Kannada

Filmibeat Kannada 2018-01-29

Views 2

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ-5' ಮುಕ್ತಾಯಗೊಂಡಿದೆ. ಬಹುತೇಕ ವೀಕ್ಷಕರ ಇಚ್ಛೆಯಂತೆ ಕನ್ನಡ rapper ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ತಮ್ಮ ಭಿನ್ನ ವಿಭಿನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದವರು ಚಂದನ್ ಶೆಟ್ಟಿ. ತಮ್ಮ ಪ್ರತಿಭೆಯ ಮೂಲಕ ಅಸಂಖ್ಯಾತ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಚಂದನ್ ಶೆಟ್ಟಿ ಇದೀಗ 'ಬಿಗ್ ಬಾಸ್' ಟ್ರೋಫಿ ಹಿಡಿದು ಗೆಲುವಿನ ನಗೆ ಬೀರಿದ್ದಾರೆ.

ಟಾಪ್ 5 ಹಂತಕ್ಕೆ ಲಗ್ಗೆ ಇಟ್ಟಿದ್ದ ನಿವೇದಿತಾ ಗೌಡ, ಶ್ರುತಿ ಪ್ರಕಾಶ್, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಅವರನ್ನ ಮಣಿಸಿ 'ಬಿಗ್ ಬಾಸ್' ಗೆಲ್ಲುವಲ್ಲಿ ಚಂದನ್ ಶೆಟ್ಟಿ ಯಶಸ್ವಿ ಆಗಿದ್ದಾರೆ. ''ಬಿಗ್ ಬಾಸ್ ಕನ್ನಡ-5' ವಿನ್ನರ್ ಚಂದನ್ ಶೆಟ್ಟಿ'' ಎಂದು ಸುದೀಪ್ ಅನೌನ್ಸ್ ಮಾಡ್ತಿದ್ದಂತೆ, ಚಂದನ್ ಶೆಟ್ಟಿ ಸಂಭ್ರಮಿಸಿದರು, ಭಾವುಕರಾದರು. ಚಂದನ್ ಶೆಟ್ಟಿ ತಂದೆ-ತಾಯಿ ಕೂಡ ಆನಂದಭಾಷ್ಪ ಸುರಿಸಿದರು.
Kannada Rapper Chandan Shetty wins Bigg Boss Kannada 5 reality show. Common Man Contestant (Sales Man) Diwakar becomes 1st Runner up.

Share This Video


Download

  
Report form
RELATED VIDEOS