ಕನ್ನಡ ಸಿನಿಮಾರಂಗದ ಅದ್ಭುತ ನಿರ್ದೇಶಕ ಕಾಶಿನಾಥ್ ಇನ್ನು ಮುಂದೆ ನೆನಪು ಮಾತ್ರ. ಸಾವು ಕಲಾವಿದರ ದೇಹಕಷ್ಟೆ. ಅವರು ಮಾಡಿದ ಸಿನಿಮಾ ಹಾಗೂ ನಟನೆ ಸದಾ ಪ್ರೇಕ್ಷಕರ ಕಣ್ಣು ಮುಂದೆ ಹಾಗೆಯೇ ಉಳಿದುಕೊಳ್ಳುತ್ತವೆ.
ಕಾಶಿನಾಥ್ ಕನ್ನಡ ಸಿನಿಮಾರಂಗದಲ್ಲಿ ಬದಲಾವಣೆಗೆ ನಾಂದಿ ಹಾಡಿದವರು. ಹೊಸ ರೀತಿಯ ಸಿನಿಮಾಗಳನ್ನ ಪರಿಚಯಿಸಿದವರು. ಕಾಶಿನಾಥ್ ನಿರ್ದೇಶಿಸಿದ ಹಾಗೂ ಅಭಿನಯಿಸಿದ ಚಿತ್ರಗಳನ್ನ ಗಮನಿಸುತ್ತಾ ಹೋದರೆ, ಅನೇಕ ಚಿತ್ರಗಳ ಟೈಟಲ್ 'ಅ' ಅಕ್ಷರದಿಂದಲೇ ಪ್ರಾರಂಭ ಆಗುತ್ತವೆ.
ಅಷ್ಟೇ ಅಲ್ಲ ಅವರು ಮಕ್ಕಳಿಗೂ 'ಅ' ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನೇ ಇಟ್ಟಿದ್ದಾರೆ. ಮಗ ಅಭಿಮನ್ಯು, ಮಗಳು ಅಮೃತವರ್ಷಿಣಿ. ಸಿನಿಮಾ ಚಿತ್ರೀಕರಣ ಮಾಡುವಾಗ, ಸಿನಿಮಾವನ್ನ ತೆರೆಗೆ ತರುವಾಗ ಶಾಸ್ತ್ರ ಕೇಳುವ ಪದ್ದತಿ ನಮ್ಮಲ್ಲಿ ಇಂದಿಗೂ ಇದೆ. ಹಾಗಾದ್ರೆ, ಕಾಶಿನಾಥ್ ಕೂಡ ಶಾಸ್ತ್ರ ಕೇಳಿ ಸಿನಿಮಾಗಳಿಗೆ 'ಅ' ಅಕ್ಷರದಿಂದ ಹೆಸರು ಇಡುತ್ತಿದ್ರಾ? ಅಂತ ಪ್ರಶ್ನೆ ಮಾಡಿದರೆ ನಿಜಕ್ಕೂ ಇಲ್ಲ.
Veteran Actor, Director Kashinath passes away in Bengaluru today (January 18th). Kashinath directed Most of the films with the title started with letter A.