ರಾಕಿಂಗ್ ಸ್ಟಾರ್ ನಟನೆಯ 'ಕೆಜಿಎಫ್' ಸಿನಿಮಾ ಬಿಡುಗಡೆಗೆ ನಾಲ್ಕೆ ನಾಲ್ಕು ದಿನ ಬಾಕಿ ಇದೆ. ಈಗಾಗಲೇ ಮೊದಲ ದಿನದ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿದೆ. ಮೊದಲ ದಿನ ಮೊದಲ ಶೋ ಸಿನಿಮಾ ನೋಡಬೇಕು ಎಂದು ಅನೇಕರು ಸಾಹಸ ಪಡುತ್ತಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಟ್ವೀಟ್ ನೋಡಿ ಕೆಲವರು ನಟ ಕಮಲ್ ಹಾಸನ್ ಅವರಿಗೂ, ಈ ಸಿನಿಮಾಗೂ ಸಂಬಂಧ ಇದ್ಯಾ? ಎಂದು ಕೇಳುತ್ತಿದ್ದರು.ಆದರೆ, ಇಂತಹ ಗೊಂದಲಕ್ಕೆ ಈಗ ಸ್ಪಷ್ಟತೆ ಸಿಕ್ಕಿದೆ.