ಡಾ ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಕೊಡಲು ಮುಂದಾದ ಈ ಕಿರುತೆರೆ ನಟ | FIlmibeat Kannada

Filmibeat Kannada 2017-12-29

Views 3.5K

Small Screen Actor Basavatti Lokesh aka Arva is ready to offer land in Chamarajnagar for Dr. Vishnuvardhan memorial.

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 7 ವರುಷಗಳು ಉರುಳಿವೆ. ಇಷ್ಟು ವರ್ಷ ಆದರೂ, ಡಾ.ವಿಷ್ಣು ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ. ಸ್ಮಾರಕ ನಿರ್ಮಾಣಕ್ಕೆ ಎದುರಾಗಿರುವ ಕಂಟಕ ಇನ್ನೂ ನಿವಾರಣೆ ಆಗಿಲ್ಲ. ಇದೇ ವಿಚಾರದ ಕುರಿತಾಗಿ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಕೂಡ ಸಿ.ಎಂ.ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿರುವ ಕಿರುತರೆ ಹಾಗೂ ಸ್ಯಾಂಡಲ್ ವುಡ್ ನಟ ಮಹೋನ್ನತ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ.ಹೌದು, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ತಮ್ಮ ಚಾಮರಾಜನಗರ ಜಿಲ್ಲೆಯಲ್ಲಿ 1 ಎಕರೆ ಜಾಗ ಕೊಡಲು ನಟ ಆರ್ವ ನಿರ್ಧರಿಸಿದ್ದಾರೆ.ನಾನು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದೇನೆ. ಅವರ ಸ್ಮಾರಕ ನಿರ್ಮಾಣವನ್ನು ಬೆಂಗಳೂರಿನಲ್ಲಿ ಮಾಡಬೇಕೆಂದು ಹಲವರು, ಮೈಸೂರಿನಲ್ಲಿ ಮಾಡಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳಾದರೂ ಸ್ಮಾರಕ ನಿರ್ಮಾಣವಾಗಿಲ್ಲ. ವಿಷ್ಣು ಅವರ ಪತ್ನಿ ಭಾರತಿ ಅವರು ಸ್ಮಾರಕ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ, ಜಾಗದ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಾನು ಸ್ಮಾರಕಕ್ಕೆ ಜಾಗ ಕೊಡಲು ಮುಂದಾಗಿದ್ದೇನೆ.

Share This Video


Download

  
Report form
RELATED VIDEOS