ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಒಂದು ಕಡೆ, ಅಂಬರೀಶ್ ಅವರ 5ನೇ ತಿಂಗಳ ಪುಣ್ಯ ಸ್ಮರಣೆ ಇನ್ನೊಂದು ಕಡೆ. ಈ ದಿನ ಕಂಠೀರವ ಸ್ಟುಡಿಯೋದಲ್ಲಿರುವ ದಿಗ್ಗಜರ ಸಮಾಧಿ ಬಳಿ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದರು. ರಾಜ್-ಅಂಬಿ ಸಮಾಧಿ ಒಂದೇ ಕಡೆ ಇದೆ. ಇದೇ ಜಾಗಕ್ಕೆ ವಿಷ್ಣುವರ್ಧನ್ ಅವರ ಸ್ಮಾರಕವನ್ನ ಶಿಫ್ಟ್ ಮಾಡಿದ್ರೆ ಎಷ್ಟು ಚೆಂದ ಎಂಬ ಭಾವನೆ. ಇದು ಆಗುತ್ತೋ ಇಲ್ವೋ ಬಟ್ ಇಂತಹದೊಂದು ಆಸೆ ಅಭಿಮಾನಿಗಳದ್ದು. ಇದೇ ಸ್ಮಾರಕಗಳ ವಿಚಾರವಾಗಿ ಅಂಬರೀಶ್ ಅವರ ಪತ್ನಿ ಸುಮಲತಾ ಕೂಡ ಮಾತನಾಡಿದ್ದಾರೆ.