ಮೊನ್ನೆಯಷ್ಟೆ 199ರೂ.ಮತ್ತು 299ರೂಪಾಯಿಗಳ ಭರ್ಜರಿ ಆಫರ್ ಘೋಷಿಸಿದ್ದ ಜಿಯೋ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಮತ್ತೆ ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಲೇ ಇದೆ.! ಹೊಸ ವರ್ಷ ಪ್ರಾರಂಭವಾಗಲು ಇನ್ನು ನಾಲ್ಕು ದಿನಗಳಿರುವಂತೆ ಜಿಯೋ ಮತ್ತೊಂದು ಬಿಗ್ ಸರ್‌ಪ್ರೈಸ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡಿದೆ.!! ಜಿಯೋವಿನ ಗ್ರಾಹಕರು ಹೊಸ ವರ್ಷದ ಕೊಡುಗೆಯಾಗಿ ಭರ್ಜರಿ 3,300 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಜಿಯೋ ಪ್ರಕಟಿಸಿದೆ. ಈ ಮೊದಲು ಜಿಯೋ ನೀಡಿದ್ದ ಟ್ರಿಪಲ್ ಕ್ಯಾಶ್‌ಬ್ಯಾಕ್ ಆಫರ್‌ಗೆ ಮತ್ತೆ ಹೆಚ್ಚು ಕೊಡುಗೆ ನೀಡಿ ಈ ಹೊಸ ಆಫರ್ ಅನ್ನು ನೀಡಲಾಗಿದೆ.!! ಹಾಗಾದರೆ, ಜಿಯೋವಿನ ಹೊಸ ಕ್ಯಾಶ್‌ಬ್ಯಾಕ್ ಆಫರ್ ಬಗ್ಗೆ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.!!
ಜಿಯೋವಿನ ಪ್ರತಿಯೋರ್ವ ಗ್ರಾಹಕನಿಗೂ ಈ 3,300 ರೂ. ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದು, 399 ರೂಪಾಯಿಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸಿದರೆ ಈ ಆಫರ್‌ಗೆ ಗ್ರಾಹಕರು ಅರ್ಹರಾಗಿರುತ್ತಾರೆ. ಜಿಯೋ ಆಪ್‌ನಲ್ಲಿ ಕೂಪನ್ ಮತ್ತು ವೋಚರ್‌ಗಳ ಮಾಹಿತಿಗಳು ಲಭ್ಯವಿರುತ್ತವೆ.!!