ಹೊಸ ವರ್ಷಕ್ಕೆ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ | Filmibeat Kannada

Filmibeat Kannada 2017-12-04

Views 739

ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿಯಾಗಿರುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಗಂಡುಗಲಿ ನಿರ್ಮಾಪಕ ಅಂತಾಲೇ ಹೆಸರು ಪಡೆದಿರುವ ನಿರ್ಮಾಪಕ ಕೆ.ಮಂಜು. ಸಾಕಷ್ಟು ನಾಯಕ ನಟರನ್ನು ಸಿನಿಮಾರಂಗಕ್ಕೆ ಪರಿಚಯಿಸಿರುವ ಕೆ.ಮಂಜು ಸ್ಯಾಂಡಲ್ ವುಡ್ ಗೆ ಈಗ ಹೊಸ ನಟನನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಪಳಗಿರುವ ಕೆ.ಮಂಜು ಒಬ್ಬ ನಾಯಕನಿಗೆ ಇರಬೇಕಾದ ಕ್ವಾಲಿಟಿಗಳೇನು ಎನ್ನುವುದನ್ನು ಚೆನ್ನಾಗಿ ಅರಿತಿದ್ದಾರೆ. ಈ ಹಿನ್ನಲೆಯಲ್ಲಿ ತಾವು ಇಂಟ್ರೊಡ್ಯೂಸ್ ಮಾಡುತ್ತಿರುವ ನಾಯಕನನ್ನು ಪರ್ಫೆಕ್ಟ್ ಆಗಿ ರೆಡಿ ಮಾಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ರನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೇ ಕೆ ಮಂಜು ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿಡಿತ್ತು. ಆದರೆ ಈಗ ನಿರ್ಮಾಪಕರು ತಮ್ಮ ಮಗನ ಲಾಂಚ್ ಗಾಗಿ ಡೇಟ್ ಫಿಕ್ಸ್ ಮಾಡಿದ್ದಾರೆ.2018 ಜನವರಿಯಲ್ಲಿ ಶ್ರೇಯಸ್ ಕೆ ಮಂಜು ಅಭಿನಯದ ಚಿತ್ರ ಸೆಟ್ಟೇರಲಿದೆ. ಯೋಗರಾಜ್ ಭಟ್, ಇಮ್ರಾನ್ ಸರ್ದಾರಿಯಾ, ಗುರು ದೇಶ್ ಪಾಂಡೆ ಈ ಮೂವರಲ್ಲಿ ಒಬ್ಬರ ಕತೆಯನ್ನು ಆಯ್ಕೆ ಮಾಡಿಕೊಳ್ಳಲು ಕೆ.ಮಂಜು ನಿರ್ಧಾರ ಮಾಡಿದ್ದಾರೆ.

Kannada cinema producer K Manju is introducing his son Sreyas. while Shreyas movie will be set in 2018.

Share This Video


Download

  
Report form
RELATED VIDEOS