ರೆಬೆಲ್ ಸ್ಟಾರ್ ಅಂಬರೀಶ್ ಮಗನ ಮೊದಲ ಸಿನಿಮಾ ಯಾವಾಗ ಮತ್ತು ಯಾವುದು ಎಂಬ ಸುದ್ದಿ ಗಾಂಧಿನಗರದಲ್ಲಿ ಆಗಾಗ ಸೌಂಡ್ ಮಾಡುತ್ತಿದೆ. ಈಗ ಅಂಬಿ ಮಗ ಅಭಿಷೇಕ್ ಅವರ ಚೊಚ್ಚಲ ಚಿತ್ರದ ಬಗ್ಗೆ ಹೊಸದೊಂದು ಸುದ್ದಿ ಹೊರಬಿದ್ದಿದೆ. ಬಹುದಿನಗಳಿಂದ ಕಾಯುತ್ತಿದ್ದ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅಂಬಿ ಮಗನ ಮೊದಲ ಸಿನಿಮಾವನ್ನ ನಿರ್ದೇಶನ ಮಾಡಲಿರುವುದು ಯಾರು? ಈ ಚಿತ್ರಕ್ಕೆ ಬಂಡವಾಳ ಯಾರು ಹಾಕುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಕನ್ನಡದ ಇಬ್ಬರು ಯುವ ನಿರ್ದೇಶಕರ ಹೆಸರು ಚಾಲ್ತಿಯಲ್ಲಿದ್ದು, ದೊಡ್ಡ ನಿರ್ಮಾಣ ಸಂಸ್ಥೆ ರೆಬೆಲ್ ಸ್ಟಾರ್ ಪುತ್ರನ ಚಿತ್ರಕ್ಕೆ ದುಡ್ಡು ಹಾಕಲು ಮುಂದಾಗಿದೆ. ಹಾಗಿದ್ರೆ ಯಾರದು?ರೆಬೆಲ್ ಸ್ಟಾರ್ ಅಂಬರೀಶ್ ಮಗನನ್ನ ಯಾವ ನಿರ್ಮಾಪಕ ಪರಿಚಯ ಮಾಡ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ಸಂದೇಶ್ ನಾಗರಾಜ್ ಅವರು ರೆಬೆಲ್ ಪುತ್ರನಿಗೆ ನಿರ್ಮಾಣ ಮಾಡಲಿದ್ದಾರಂತೆ.
Producer Sandesh Nagaraj formally announced that their next project under their banner will feature Ambareesh’s son to be produced by his son Sandesh N.