The first thing that comes to your mind when you think of Lord Hanuman is strength; immense strength! And when we think of Hanuman, we tend to feel courageous. In fact, courage is the only hope when your life is surrounded by problems and obstacles. Lord Hanuman's tallest idol in the world & its Abhishekham video. Must watch.
ಅಂಜನೀಪುತ್ರ ವೀರ ಹನುಮಾನ್ ಇಂದು ಹೆಚ್ಚಿನವರಿಗೆ ಮಾರ್ಗದರ್ಶಕರು, ಗುರುಗಳು ಎಂದೆನಿಸಿದ್ದಾರೆ. ದೇವರಾಗಿ ಅವರನ್ನು ಪೂಜಿಸುವುದು ಮಾತ್ರವಲ್ಲದೆ ಸಾಹಸ ಪರಾಕ್ರಮಗಳ ಹೆಸರು ಬಂತೆಂದರೆ ಅಲ್ಲಿ ಬರುವ ಮೊದಲ ಹೆಸರೇ ಆಂಜನೇಯ. ಯಾವುದೇ ಕುಸ್ತಿ ಅಖಾಡಾದಲ್ಲಿ ಹನುಮನನ್ನು ಪೂಜಿಸಿ ನಂತರಷ್ಟೇ ತಾಲೀಮನ್ನು ನಡೆಸುತ್ತಾರೆ. ಹೀಗೆ ಆಂಜನೇಯನು ಪ್ರತಿಯೊಬ್ಬ ಕುಸ್ತಿ ಪಟು, ಜಿಮ್ ಪಟು, ಸಾಧಕರನ್ನು ಮುನ್ನಡೆಸುವವರಾಗಿದ್ದಾರೆ. ರಾಮಾಯಣದಲ್ಲಿ ಬರುವ ಕಥೆಯಲ್ಲಿ ಹನುಮನಿಗೆ ತಮ್ಮ ಸಾಧನೆ ಪರಾಕ್ರಮಗಳ ಬಗ್ಗೆ ಅರಿವೇ ಇರುವುದಿಲ್ಲ. ಶ್ರೀರಾಮನ ಸಂದೇಶವನ್ನು ರಾವಣನ ಬಂಧನದಲ್ಲಿರುವ ಸೀತಾ ಮಾತೆಗೆ ತಲುಪಿಸುವ ಬಗೆ ಮತ್ತು ಆಕೆಯ ಯೋಗಕ್ಷೇಮವನ್ನು ಅರಿತುಕೊಳ್ಳಲು ಯಾರನ್ನು ಕಳುಹಿಸುವುದು ಎಂಬುದಾಗಿ ಚರ್ಚೆ ನಡೆಸುವಾಗ ಎಲ್ಲರೂ ಹನುಮನ ಹೆಸರನ್ನು ಸೂಚಿಸುತ್ತಾರೆ. ಆದರೆ ಹನಮಂತನಿಗೆ ತಮ್ಮ ಶಕ್ತಿ ಸಾಮರ್ಥ್ಯದ ಮೇಲೆಯೇ ನಂಬಿಕೆ ಇರುವುದಿಲ್ಲ. ಇದರಿಂದ ಅವರು ಮೊದಲು ಹಿಂಜರಿಯುತ್ತಾರೆ. ಆದರೆ ಸುಗ್ರೀವನು ಅಂಜನೀ ಪುತ್ರನ ಗುಣಗಾನ ಅವರ ಶಕ್ತಿ ಪರಾಕ್ರಮಗಳನ್ನು ಹೊಗಳುತ್ತಾ ಹೋದಂತೆ ಬೃಹದಾಕಾರವಾಗಿ ಆಂಜನೇಯ ನಿಂತುಬಿಡುತ್ತಾರೆ.ಇನ್ನು ವಿಶ್ವದ ಅತಿ ದೊಡ್ಡ ಆಂಜನೇಯನ ವಿಗ್ರಹಕ್ಕೆ ಅಭಿಷೇಖ ಮಾಡುತ್ತಿರುವ ಈ ವಿಡಿಯೋ ನೋಡಿ.