I have sent a legal notice to Mr. Pratap Simha (BJP Mysuru MP), as a citizen of this country for the way he has trolled me which has disturbed my personal life. I am asking him to answer legally & if he doesn't, I will be taking criminal action against him said Actor Prakash Rai In Bengaluru press club on November 23.
ಟ್ರೋಲ್ ಗೂಂಡಾಗಿರಿ ವಿರುದ್ಧ ಸಿಡಿದೆದ್ದ ರೈ, ಸಿಂಹಗೆ ನೋಟಿಸ್. ತಕ್ಕುದಾದ ಇಮೇಜ್ ಗಳನ್ನು ಬಳಸಿಕೊಂಡು ಮತ್ತೊಬ್ಬರ ಮನಸ್ಸನ್ನು ನೋಯಿಸಿ ಸಖತ್ ಮಜಾ ಅನುಭವಿಸುವ ಟ್ರೋಲ್ ಮಹಾರಾಜರುಗಳ ವಿರುದ್ಧ ಧ್ವನಿ ಎತ್ತಲು ನಟ ಪ್ರಕಾಶ್ ರೈ ಸಿದ್ಧರಾಗಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಟ್ರೋಲ್ ಗೂಂಡಾಗಿರಿ ವಿರುದ್ಧ just asking ಹೆಸರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ, "ಯಾವುದೇ ಹೇಳಿಕೆಗಳನ್ನ ಕೊಟ್ಟರು ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದೆ. ಇದು ಒಂದು ರೀತಿಯ ಗೂಂಡಾ ಪ್ರವೃತ್ತಿ. ನನ್ನ ರಿಯಲ್ ಲೈಫ್ ನಲ್ಲೂ ಖಳನಾಯಕ ಅಂತ ಕರೆಯೋದಕ್ಕೆ ಶುರು ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಇಂದು ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಟ್ರೋಲ್ ಮಾಡಿ ನನ್ನ ವೈಯುಕ್ತಿಕ ಜೀವನದ ಬಗ್ಗೆ ಅಪಹಾಸ್ಯ ಮಾಡಿದ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದೇನೆ.