ಇತ್ತೀಚೆಗೆ ಹಿಂದೂ ಭಯೋತ್ಪಾದನೆ, ಉತ್ತರ ಪ್ರದೇಶ ಮಕ್ಕಳ ಸಾವು, ಗೌರಿ ಲಂಕೇಶ್ ಹತ್ಯೆ ಹೀಗೆ ಸಾಕಷ್ಟು ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಟೀಕಿಸುತ್ತಾ ಬರುತ್ತಿರುವ ನಟ ಪ್ರಕಾಶ್ ರೈ ಅವರು ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ತಮ್ಮ ಮಾತಿನ ಪ್ರತಾಪ ತೋರಿಸಿದ್ದಾರೆ. "ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟನಷ್ಟೆ, ಆದರೆ ತಾನೊಬ್ಬ ದೊಡ್ಡ ನಟ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ, ಡಾ.ರಾಜ್, ಅಮಿತಾಬ್ ಬಚ್ಚನ್, ಎನ್.ಟಿ.ಆರ್ ಅವರ್ಯಾರು ಇವರ ರೀತಿ ಅಂದುಕೊಂಡಿರಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಹೃದಯ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿಗೆ ಏಕೆ ಮೀಡಿಯುವುದಿಲ್ಲ. ಇತರರನ್ನು ಪ್ರಶ್ನೆ ಮಾಡುವ ಆತುರದಲ್ಲಿ ಪ್ರಕಾಶ್ ರೈ ತಮ್ಮ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ ಅಂತ ಕಿಡಿಕಾರಿದ್ರು.
Listen to what does Pratap simha has to say about Prakash Rai's statements and further development about the issue