ಬಿಗ್ ಬಾಸ್ ಕನ್ನಡ ಸೀಸನ್ 5 : ಅಡುಗೆಮನೆಯ ವಿಷ್ಯಕ್ಕೆ ಇರಿಟೇಟ್ ಆದ ಅನುಪಮಾ ಗೌಡ | Filmibeat Kannada

Filmibeat Kannada 2017-11-09

Views 2

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.! ಹಾಲನ್ನ ಮುಚ್ಚಿಡುವಾಗ (ಎತ್ತಿಡುವಾಗ.!?)... ಇದು ಸರಿಯೋ, ತಪ್ಪೋ.. ಎಂಬ ಕನಿಷ್ಟ ಪ್ರಜ್ಞೆ ಕೂಡ ಇಲ್ಲದೆ, ಮಾಡುವ ಕೆಲಸವನ್ನ ಮಾಡಿ, ನಂತರ ಅದಕ್ಕೆ ಸಮರ್ಥನೆ ಕೊಟ್ಟ ಅನುಪಮಾ ಗೌಡ ಈಗ ಉರ್ಕೊಳ್ತಿದ್ದಾರೆ. ಅಡುಗೆ ಸಾಮಾನು, ತರಕಾರಿ, ಹಣ್ಣು, ರೇಷನ್, ಹಾಲು... ಹೀಗೆ, ಎಲ್ಲದರ ಮೇಲೆ ಕ್ಯಾಪ್ಟನ್ ಹಾಗೂ ಅಡುಗೆ ಮನೆಯ ಡಿಪಾರ್ಟ್ಮೆಂಟ್ ನವರು ನಿಗಾ ಇಡುತ್ತಿದ್ದರೆ, ಅನುಪಮಾಗೆ ಸಹಿಸಿಕೊಳ್ಳಲು ಆಗದೆ ಇರುವಷ್ಟು ಹಿಂಸೆ ಆಗುತ್ತಿದೆ. ಅಡುಗೆ ಮನೆಯಲ್ಲಿ ತಮಗೆ ಆಗುತ್ತಿರುವ 'ಹಿಂಸೆ'ಯನ್ನ ತಮ್ಮ ಸೆಲೆಬ್ರಿಟಿ 'ಗುಂಪಿನ' ಮುಂದೆ ಅನುಪಮಾ ಗೌಡ ಹೇಳಿಕೊಂಡಿದ್ದು ಹೀಗೆ..''ದೋಸೆ ಹಾಕಿ ಕೊಟ್ಟಾಗ, ಇನ್ನೂ ಚೆನ್ನಾಗಿ ರುಬ್ಬಬೇಕಿತ್ತು ಅಂತಾನೆ ಚಂದನ್ ಶೆಟ್ಟಿ. ನಿಂತುಕೊಂಡು ರುಬ್ಬಿದ್ರೆ, ಗೊತ್ತಾಗುತ್ತಿತ್ತು. ಒಂದು ಪ್ಯಾಕೆಟ್ ಹಾಲಿನಲ್ಲಿ ನಾವು ಇಡೀ ದಿನ ಮ್ಯಾನೇಜ್ ಮಾಡುತ್ತಿದ್ವಿ. ಆದ್ರೀಗ ಒಂದು ಹೊತ್ತಿಗೆ ಒಂದು ಪ್ಯಾಕೆಟ್ ಹಾಲು ಬೇಕಾಗಿದೆ'' ಎಂದಿದ್ದಾರೆ ಅನುಪಮಾ ಗೌಡ.
Bigg Boss Kannada 5: Week 4: Anupama Gowda is not happy with Kitchen Department. Anupama Gowda cannot tolerate when other checks the items in the Kitchen.

Share This Video


Download

  
Report form
RELATED VIDEOS